ಸುಳ್ಯ: ಅಪರಿಚಿತ ತಂಡದಿಂದ ಗುಂಡಿನ ದಾಳಿ ➤ ಅಪಾಯದಿಂದ ಪಾರಾದ ವ್ಯಕ್ತಿ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಸುಳ್ಯ, ಜೂ.06. ಸ್ಕಾರ್ಪಿಯೋ ಕಾರಿನಲ್ಲಿ ಬಂದ ನಾಲ್ಕು ಜನ ಅಪರಿಚಿತರ ತಂಡವು ಯುವಕನೋರ್ವನ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಭಾನುವಾರ ತಡರಾತ್ರಿ ಸುಳ್ಯದಲ್ಲಿ ನಡೆದಿದೆ.

ಗುಂಡಿನ ದಾಳಿಯಿಂದ ಯುವಕ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಕಾರಿಗೆ ಹಾನಿ ಸಂಭವಿಸಿದೆ. ಮಾಣಿ-ಮೈಸೂರು ಹೆದ್ದಾರಿಯಲ್ಲಿ ಸುಳ್ಯ ನಗರದ ಜ್ಯೋತಿ ಸರ್ಕಲ್‌ ಹತ್ತಿರ ಘಟನೆ ನಡೆದಿದ್ದು ಸುಳ್ಯ ಜಯನಗರದ ಮಹಮ್ಮದ್‌ ಸಾಯಿ(39) ಎಂಬವರ ಮೇಲೆ ಸ್ಕಾರ್ಪಿಯೋದಲ್ಲಿ ಬಂದ ಅಪರಿಚಿತರು ದಾಳಿ ಮಾಡಿದ್ದಾರೆ. ಮಹಮ್ಮದ್ ಸಾಯಿ ತನ್ನ ಮನೆಗೆ ಹೋಗುವ ಸಲುವಾಗಿ ತನ್ನ ಕಾರಿನ ಬಳಿಗೆ ಬಂದು ಡೋರ್‌ ತೆರೆಯಲು ಸಿದ್ಧತೆ ಮಾಡುತ್ತಿರುವಾಗ ಜ್ಯೋತಿ ಸರ್ಕಲ್‌ ಕಡೆಯಿಂದ ಬಂದ ಸ್ಕಾರ್ಪಿಯೋ ಕಾರಿನಲ್ಲಿದ್ದ ನಾಲ್ಕು ಜನ ಅಪರಿಚಿತರು ಇವರ ಕಡೆಗೆ ಗುಂಡು ಹಾರಿಸಿದ್ದು, ಈ ವೇಳೆ ಕಾರಿನ ಬಲ ಬದಿಯ ಎರಡು ಡೋರ್‌ಗಳ ಮಧ್ಯಕ್ಕೆ ಗುಂಡು ತಾಗಿದ ಗುರುತು ಕಂಡು ಬರುತ್ತದೆ. ಘಟನೆಯಲ್ಲಿ ಮಹಮ್ಮದ್ ಸಾಯಿ ಅವರ ಬೆನ್ನಿನ ಭಾಗಕ್ಕೆ ಗಾಯವಾಗಿದೆ ಎನ್ನಲಾಗಿದ್ದು, ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಳ್ಯ ವೃತ್ತ ನಿರೀಕ್ಷಿತ ನವೀನ್‌ಚಂದ್ರ ಜೋಗಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ➤➤ Breaking News ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು ➤ ಓರ್ವ ಗಂಭೀರ

 

 

error: Content is protected !!
Scroll to Top