ಪುತ್ತೂರು: ಹಿಂಜಾವೇ ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ಮರ್ಡರ್..!!!

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 04. ಕಳೆದ ಎರಡು ವರ್ಷಗಳ ಹಿಂದೆ ಹಿಂಜಾವೇ ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಪ್ರಮುಖ ಆರೋಪಿ ಆರೋಪಿ ಆರ್ಯಾಪು ನಿವಾಸಿ ಚರಣ್ ರಾಜ್ ನನ್ನು ಪೆರ್ಲಂಪಾಡಿ ಸಮೀಪ ಹತ್ಯೆ ಮಾಡಲಾದ ಘಟನೆ ವರದಿಯಾಗಿದೆ.

2018ರ ಸೆ. 03ರಂದು ರಾತ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂದರ್ಭ ಹಿಂಜಾವೇ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮೇರ್ಲ ಅವರನ್ನು ಹತ್ಯೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿ ಚರಣ್ ರಾಜ್, ಕಿರಣ್ ರೈ ಹಾಗೂ ಪ್ರೀತೇಶ್ ಶೆಟ್ಟಿ ಎಂಬವರನ್ನು ಬಂಧಿಸಲಾಗಿತ್ತು. ಚರಣ್ ರಾಜ್ ಅವರ ಮೆಡಿಕಲ್ ಶಾಪ್ ನಾಳೆ ಪೆರ್ಲಂಪಾಡಿಯಲ್ಲಿ ಆರಂಭಗೊಳ್ಳಲಿದ್ದು, ಈ ಹಿನ್ನೆಲೆ ಅಲ್ಲಿ ಕೆಲಸ ನಿರತರಾಗಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದು ತಲ್ವಾರಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Also Read  ಗೋಳಿಯಡ್ಕ: ಅಸೌಖ್ಯದಿಂದ ನಿಧನ

error: Content is protected !!
Scroll to Top