ಪಠ್ಯಪರಿಷ್ಕರಣಾ ಸಮಿತಿಯ ವಿಸರ್ಜನೆಯ ನಾಟಕ- ಕನ್ನಡಿಗರನ್ನು ಮೂರ್ಖರನ್ನಾಗಿಸುವ ರಾಜ್ಯ ಸರ್ಕಾರದ ತಂತ್ರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 04. ರಾಜ್ಯದಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ನಡೆದ ಪಠ್ಯಪರಿಷ್ಕರಣೆಯ ವಿರುಧ್ದ ಹೋರಾಟಗಳು ತೀವ್ರಗೊಳ್ಳುತ್ತಿದ್ದಂತೆ ಪಠ್ಯಪರಿಷ್ಕರಣೆಯ ಸಮಿತಿಯನ್ನು ವಿಸರ್ಜನೆಗೊಳಿಸಿದ್ದೇವೆ ಎಂಬ ನಾಟಕವನ್ನಾಡಿ ಕನ್ನಡಿಗರನ್ನು ಮೂರ್ಖರನ್ನಾಗಿಸುವ ತಂತ್ರವನ್ನು ರಾಜ್ಯ ಸರ್ಕಾರ ನಡೆಸುತ್ತಿದೆಯೆಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿಯು ಆರೋಪಿಸಿದೆ.

ಪಠ್ಯಪರಿಷ್ಕರಣೆ ನಡೆದ ಮೇಲೆ ಆ ಸಮಿತಿಯ ಅವಶ್ಯಕತೆಯೇ ಇರುವುದಿಲ್ಲ, ಅದೊಂದು ತಾತ್ಕಾಲಿಕ ಸಮಿತಿಯಾಗಿದ್ದು ಅದನ್ನು ವಿಸರ್ಜನೆ ಮಾಡುವುದು ಸರ್ವೇ ಸಾಮಾನ್ಯ. ಆದರೆ, ಇದನ್ನೇ ನೆಪವಾಗಿಸಿ ಹೋರಾಟಗಳ ತೀವ್ರತೆಯನ್ನು ಕಡಿಮೆಗೊಳಿಸಲು ರಾಜ್ಯ ಸರ್ಕಾರ ವ್ಯರ್ಥ ಪ್ರಯತ್ನ ನಡೆಸುತ್ತಿದೆ. ಮೊದಲು ರಾಜ್ಯ ಸರ್ಕಾರ ಕುವೆಂಪುರವರಿಗೆ ಅವಮಾನಗೈದ ರೋಹಿತ್ ಚಕ್ರತೀರ್ಥರನ್ನು ಬಂಧಿಸಿ ಕನ್ನಡಿಗರಿಗೆ ಉತ್ತರ ನೀಡಲಿ.
ರಾಜ್ಯ ಸರ್ಕಾರವು ಈ ನಾಟಕವನ್ನು ಬಿಟ್ಟು ಈ ಹಿಂದೆ ಬರಗೂರು ರಾಮಚಂದ್ರಪ್ಪ ನಡೆಸಿದ ಪಠ್ಯವನ್ನೇ ಈ ಬಾರಿಯೂ ವಿದ್ಯಾರ್ಥಿಗಳಿಗೆ ವಿತರಿಸಬೇಕು. ದೇಶದ್ರೋಹಿ ಹೆಡ್ಗೆವಾರ್ ಪಠ್ಯವನ್ನು ಕೈಬಿಡಬೇಕು ಹಾಗೂ ಇನ್ನಿತರ ಎಲ್ಲಾ ಬ್ರಾಹ್ಮಣೀಕರಣದ ಅಂಶಗಳನ್ನು ದೂರವಿಟ್ಟು ಜಾತ್ಯಾತೀತ ಪರಿಕಲ್ಪನೆಯುಳ್ಳ ಪಠ್ಯವನ್ನು ಶೀಘ್ರ ವಿದ್ಯಾರ್ಥಿಗಳಿಗೆ ವಿತರಿಸಬೇಕು ಇಲ್ಲವೇ ಈ ಹೋರಾಟಗಳು ಇನ್ನೂ ಶಕ್ತಗೊಳ್ಳಲಿದೆ ಎಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಲ್ತಾಫ್ ಹೊಸಪೇಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಇನ್ನುಂದೆ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದರೆ 3 ತಿಂಗಳು ರದ್ದಾಗುತ್ತೆ ಲೈಸೆನ್ಸ್.!!

error: Content is protected !!
Scroll to Top