(ನ್ಯೂಸ್ ಕಡಬ) newskadaba.com ಕಡಬ, ಜೂ.12. ಮಂಗಳೂರಿನ ಪ್ರತಿಷ್ಠಿತ ಸಿಬಿಎಸ್ಸಿ ವಿದ್ಯಾಸಂಸ್ಥೆಯಾದ ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕಡಬದ ವಿದ್ಯಾರ್ಥಿನಿಯೋರ್ವಳು 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಅಂಕ ಗಳಿಸುವುದರ ಮೂಲಕ ಕಡಬಕ್ಕೆ ಕೀರ್ತಿಯನ್ನು ತಂದಿದ್ದಾಳೆ. ಈಕೆಯು ಕಡಬದ ಕಳಾರ ನಿವಾಸಿ ಪ್ರಸ್ತುತ ವಿದೇಶದಲ್ಲಿ ಉದ್ಯಮವನ್ನು ಹೊಂದಿರುವ ಅಬ್ದುಲ್ ನಸೀರ ಹಾಗೂ ಜಮೀಳಾ ದಂಪತಿಯ ಪುತ್ರಿ.
ಸಿಬಿಎಸ್ಸಿ ಪರೀಕ್ಷೆ: ಕಡಬದ ಹಾಜಿರಾ ನಸೀರ್ 100% ದಲ್ಲಿ ಉತ್ತೀರ್ಣ
