ತೆಂಗಿನ ಸಿಪ್ಪೆಯಲ್ಲಿದ್ದ ಹಾವು ಕಚ್ಚಿ ಮಹಿಳೆ ಮೃತ್ಯು..!!

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 04. ಹಾವು ಕಚ್ಚಿದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕುಕ್ಕಾಜೆ ಎಂಬಲ್ಲಿ ನಡೆದಿದೆ.


ಮೃತ ಮಹಿಳೆಯನ್ನು ಕುಕ್ಕಾಜೆ ನಿವಾಸಿ ಕೆ.ಗಿರಿಯಪ್ಪ ಪೂಜಾರಿ ಎಂಬವರ ಪತ್ನಿ ವಾರಿಜ ಎಂದು ಗುರುತಿಸಲಾಗಿದೆ. ಇವರು ತನ್ನ ಮನೆಯ ಹಿಂಬದಿಯಲ್ಲಿದ್ದ ಶೆಡ್ ನಲ್ಲಿ ತೆಂಗಿನ ಸಿಪ್ಪೆ ತುಂಬಿಸಿಟ್ಟಿದ್ದ ಗೋಣಿಚೀಲಕ್ಕೆ ಕೈಹಾಕಿದ್ದರು. ಈ ಸಂದರ್ಭ ವಾರಿಜರವರು ಎಡಕೈಯ ಹೆಬ್ಬೆರಳಿನ ಹತ್ತಿರ ಯಾವುದೋ ಹಾವು ಕಚ್ಚಿದೆ ಎಂದು ಜೋರಾಗಿ ಕಿರುಚಾಡಿದ್ದು ತಕ್ಷಣ ಅವರ ಗಂಡ ಓಡಿಬಂದು ಪ್ರಥಮ ಚಿಕಿತ್ಸೆ ನೀಡಿ, ಕೂಡಲೇ ಪುತ್ತೂರಿನ ನಾಟಿ ವೈದ್ಯರಾದ ಐತಾಳರ ಬಳಿ ಕರೆದುಕೊಂಡು ಹೋಗಿ ಅಲ್ಲಿ ವೈದ್ಯರು ಇಲ್ಲದೇ ಇದ್ದುದರಿಂದ ಚಿಕಿತ್ಸೆಗಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದು, ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Also Read  ಪೊಲೀಸ್ ಕಾನ್ ಸ್ಟೆಬಲ್ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ..!

error: Content is protected !!
Scroll to Top