ಪುತ್ತೂರು: ಹಿಂದೂ ವ್ಯಕ್ತಿಯ ಮನೆಯಲ್ಲಿ ಮುಸ್ಲಿಂ ಮಹಿಳೆ..!!

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 03. ಕೊಡಿಪ್ಪಾಡಿ ಸಮೀಪವಿರುವ ಹಿಂದೂ ವ್ಯಕ್ತಿಗೆ ಸೇರಿದ ಮನೆಯೊಂದರಲ್ಲಿ ಮುಸ್ಲಿಂ ಮಹಿಳೆಯಿರುವ ಮಾಹಿತಿ ಹರಿದಾಡುತ್ತಿದ್ದಂತೆ ಘಟನಾ ಸ್ಥಳದಲ್ಲಿ ಎರಡೂ ಕೋಮಿನವರು ಜಮಾಯಿಸಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಆದರೆ ಪೊಲೀಸ್ ಇಲಾಖೆ ಅಂತಹ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಆಟೋ ಚಾಲಕರೋರ್ವರು ಮನೆಯ ಎದುರಿನಿಂದ ಬೀಗ ಹಾಕಿ ಹಿಂಬಾಗಿಲ ಮೂಲಕ ಮನೆಯಲ್ಲಿ ಮುಸ್ಲಿಂ ಮಹಿಳೆಯನ್ನು ಇರಿಸಿಕೊಂಡಿದ್ದಾರೆಂದು ಸುದ್ದಿ ಹರಿದಾಡುತ್ತು. ಮನೆಯ ಮುಂದೆ ನೂರಾರು ಜನ ಜಮಾಯಿಸಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದೂ ಉಲ್ಲೇಖಿಸಲಾಗಿತ್ತು. ಪೊಲೀಸರು ತೆರಳಿದ ಬಳಿಕ ಮನೆಯೊಳಗಿದ್ದ ಮಹಿಳೆ ಮತ್ತು ಚಾಲಕ ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ಆದರೆ ಈ ಕುರಿತು ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Also Read  ಮಂಗಳೂರು: ಮಹಿಳೆಯರ ಸರಗಳ್ಳತನ ಪ್ರಕರಣ ➤ ಮೂವರು ಅರೆಸ್ಟ್

error: Content is protected !!
Scroll to Top