ಕಾಂಗ್ರೆಸ್ ನಾಯಕ ಹರಿಕೃಷ್ಣ ಬಂಟ್ವಾಳ್ ನಾಳೆ ಬಿಜೆಪಿಗೆ ಸೇರ್ಪಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.10. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರ ಆಪ್ತ ಹರಿಕೃಷ್ಣ ಬಂಟ್ವಾಳ ಅವರು ಶನಿವಾರ ನೆಹರೂ ಮೈದಾನದಲ್ಲಿ ನಡೆಯಲಿರುವ ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆಯ ವೇಳೆ ಬಿಜೆಪಿ ಸೇರಲಿದ್ದು, ಇದರೊಂದಿಗೆ ಕಳೆದ ಕೆಲವು ದಿನಗಳಿಂದ ಉಂಟಾಗಿದ್ದ ಉಹಾಪೋಹಗಳಿಗೆ ತೆರೆ ಬಿದ್ದಿದೆ.

ಈ ಬಗ್ಗೆ ಹರಿಕೃಷ್ಣ ಬಂಟ್ವಾಳ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಮಾಣಿಯಲ್ಲಿ ಸರ್ಕಾರದ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಮಾಣಿಯಲ್ಲಿರುವ ಸರ್ಕಾರಿ ಜಾಗವು ರಮಾನಾಥ ರೈ ಅವರ ಪತ್ನಿಯ ಹೆಸರಿನಲ್ಲಿದೆ.

ರಮಾನಾಥ ರೈ ನನ್ನ ಈ ಆರೋಪವನ್ನು ಇದುವರೆಗೆ ಕಡೆಗಣಿಸಲು ಹೋಗಿಲ್ಲ. ಯಾಕೆಂದರೆ ಅವರು ಅಪರಾಧ ಮಾಡಿದ್ದಾರೆ. ಎಲ್ಲಾ ಕಾನೂನು, ನಿಯಮಾವಳಿಯನ್ನು ಗಾಳಿಗೆ ತೂರಿ ಸುಮಾರು ಎರಡೂವರೆ ಎಕ್ರೆ ಜಾಗವನ್ನು ಶೈಲಾ ರೈ ಹೆಸರಿಗೆ ಮಾಡಿದ್ದಾರೆ. ಶೈಲಾ ಯಾರು? ಇದರ ಬಗ್ಗೆ ಯಾವುದೇ ದಾಖಲೆ ಇದೆಯಾ? ಶೈಲಾ ಹೆಸರಿನಲ್ಲಿ ಆಧಾರ್ ಕಾರ್ಡ್ ಇದೆಯಾ ಅಥವಾ ರೈ ಜಾಗ ಕಬಳಿಸಲು ತನ್ನ ಪತ್ನಿಗೆ ಮತ್ತೊಂದು ಹೆಸರು ನೀಡಿದ್ದಾರೆಯಾ ಎಂದು ಹರಿಕೃಷ್ಣ ಪ್ರಶ್ನಿಸಿದರು.

Also Read  ದಂಪತಿ ಕಲಹಕ್ಕೆ ಇಬ್ಬರು ಕಂದಮ್ಮಗಳು ಬಲಿ


ತನ್ನ ಮನೆಗೆ ಸಮೀಪದಲ್ಲೇ ಇರುವ ಸುಮಾರು ಹತ್ತು ಎಕ್ರೆ ಸರಕಾರಿ ಜಾಗವನ್ನು ಕಬಳಿಸಿಕೊಂಡಿರುವ ರಮಾನಾಥ ರೈ ಇದರಲ್ಲಿ ಕಳೆದ ಐದು ವರ್ಷಗಳಿಂದ ರಬ್ಬರ್ ತೋಟ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಆಕ್ರಮಿಸಿಕೊಂಡಿರುವ ಜಾಗವನ್ನು ಮರಳಿ ಪಡೆಯಬೇಕು ಎಂದು ಆಗ್ರಹಿಸಿದರು.

error: Content is protected !!
Scroll to Top