ಮೊಬೈಲ್ ಕೊಡಿಸಲಿಲ್ಲವೆಂದು ತಾಯಿಯನ್ನೇ ಕತ್ತು ಹಿಸುಕಿ ಕೊಂದ ಮಗ..!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 03. ಮೊಬೈಲ್ ಕೊಡಿಸಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಸ್ತತಃ ಮಗನೇ ತಾಯಿಯನ್ನು ಕತ್ತು ಹಿಸುಕಿ ಕೊಂದ ಘಟನೆ ಬೇಗೂರಿನ ಮೈಲಸಂದ್ರ ಎಂಬಲ್ಲಿ ನಡೆದಿದೆ.


ಒಂದು ವಾರದಿಂದ ಮೊಬೈಲ್ ಕೊಡಿಸುವಂತೆ ಪೀಡಿಸುತ್ತಿದ್ದ ಮಗನಿಗೆ ಕೈಯಲ್ಲಿ ಹಣವಿಲ್ಲವೆಂದು ಮೊಬೈಲ್ ಕೊಡಿಸಲು ತಾಯಿ ನಿರಾಕರಿಸಿದ್ದು, ಇದರಿಂದ ಕೋಪಗೊಂಡ ಮಗ ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಪುತ್ತೂರು: ಅಂತರಾಜ್ಯ ಸರಗಳ್ಳರ ಬಂಧನ ➤ 2 ದ್ವಿಚಕ್ರ ವಾಹನ ಹಾಗೂ ಚಿನ್ನಾಭರಣ ವಶಕ್ಕೆ

error: Content is protected !!
Scroll to Top