ಸೌತಡ್ಕ ದೇವಸ್ಥಾನದಲ್ಲಿ ಮಹಿಳೆಯ ಬ್ಯಾಗ್ ನಿಂದ ಚಿನ್ನಾಭರಣ ಕಳವು ➤ ಆರೋಪಿ ಮಹಿಳೆ ಅಂದರ್..!!

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 03. ಶ್ರೀಕ್ಷೇತ್ರ ಸೌತಡ್ಕ ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ಬಂದಿದ್ದ ಮಹಿಳೆಯೋರ್ವರ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಹಿಳೆಯನ್ನು ಬಂಧಿಸಿ ಆಕೆಯಿಂದ ಚಿನ್ನಾಭರಣ ವಶಪಡಿಸಿಕೊಂಡ ಘಟನೆ ನಡೆದಿದೆ.

ಬಂಧಿತ ಮಹಿಳೆಯನ್ನು ಗದಗ ಬೆಟಗೇರಿ ನಿವಾಸಿ ಭೀಮವ್ವ ಯಾನೆ ನಾಗಮ್ಮ (63) ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ಶ್ರೀಕ್ಷೇತ್ರ ಸೌತಡ್ಕಕ್ಕೆ ದೇವರ ದರ್ಶನ ಪಡೆಯಲು ಕುಟುಂಬ ಸಮೇತರಾಗಿ ಬಂದ ಬೆಳ್ತಂಗಡಿ ಮೂಲದ ಮುಂಬೈ ನಿವಾಸಿ ಬಾಲಚಂದ್ರ ಡಿ ಎಂಬವರು ಸೌತ್ತಡ್ಕ ಶ್ರೀ ಗಣಪತಿ ದೇವರ ಸೇವೆ ಮತ್ತು ದರ್ಶನವನ್ನು ಪಡೆದು ತೀರ್ಥ ಪ್ರಸಾದವನ್ನು ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಸಮಯದಲ್ಲಿ ಬಾಲಚಂದ್ರ ಅವರ ಪತ್ನಿಯ ಬ್ಯಾಗಿನಲ್ಲಿದ್ದ ಚಿನ್ನಾಭರಣದ ಪರ್ಸ್‌ ಕಳ್ಳತನವಾಗಿತ್ತು. ಈ ಕುರಿತು ನೀಡಿದ ದೂರಿನಂತೆ ಪರಿಶೀಲನೆ ನಡೆಸಿದ ಧರ್ಮಸ್ಥಳ ಪೊಲೀಸ್‌ ಉಪನಿರೀಕ್ಷಕರ ವಿಶೇಷ ತಂಡವು ಆರೋಪಿ ಭೀಮವ್ವನನ್ನು ಬಂಧಿಸಿದ್ದಾರೆ.

Also Read  ಸಾಲಬಾಧೆ, ಆರ್ಥಿಕ ಸಮಸ್ಯೆ ಇಂದ ದೂರವಾಗ ಬೇಕೆಂದರೆ ಈ ಸುಲಭ ಪರಿಹಾರ ಮಾಡಿ.

error: Content is protected !!
Scroll to Top