ಜೇಸಿಐ ವಲಯ 15ರ ಮಧ್ಯಂತರ ಸಮ್ಮೇಳನ ‘ರಂಗೋಲಿ – 2022’ ➤ JFM ಕಾಶೀನಾಥ್ ಗೋಗಟೆ ನೇತೃತ್ವದ ಜೇಸಿಐ ಕಡಬ ಕದಂಬ ಘಟಕಕ್ಕೆ ಪ್ರಶಸ್ತಿಗಳ ಸುರಿಮಳೆ

(ನ್ಯೂಸ್ ಕಡಬ) newskadaba.com ಕಡಬ, ಮೇ.31. ಜೇಸಿಐ ಮಡಂತ್ಯಾರು ಆತಿಥ್ಯದಲ್ಲಿ ನಡೆದ ವಲಯ 15 ರ ಮಧ್ಯಂತರ ಸಮ್ಮೇಳನದಲ್ಲಿ ಜೆಸಿಐ ಕಡಬ ಕದಂಬ ಘಟಕವು ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಜೆಸಿಐ ವಲಯ 15ರ ಅಧ್ಯಕ್ಷ ರಾಯನ್ ಉದಯ್ ಕ್ರಾಸ್ತಾರವರ ಅಧ್ಯಕ್ಷತೆಯಲ್ಲಿ ನಡೆದ ಮಧ್ಯಂತರ ಸಮ್ಮೇಳನ ‘ರಂಗೋಲಿ’ ಕಾರ್ಯಕ್ರಮದಲ್ಲಿ ವಲಯ 15ರ ಏರಿಯಾ ‘ಎ’ ವಿಭಾಗದ ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ವಿನ್ನರ್ ಆಗಿ ಜೇಸಿಐ ಕಡಬ ಕದಂಬ ಘಟಕಾಧ್ಯಕ್ಷ JFM ಕಾಶೀನಾಥ್ ಗೋಗಟೆಯವರು ಮೂಡಿಬಂದಿದ್ದಾರೆ. ಇನ್ನುಳಿದಂತೆ ಮಿಡ್ ಕಾನ್ 2022 ರಂಗೋಲಿ ವಲಯ 15ರ ಎರಿಯಾ ‘ಎ’ ವಿಭಾಗದ ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ಅವಾರ್ಡ್ ವಿನ್ನರ್ ಪ್ರಶಸ್ತಿ, ಸ್ಪೆಷಲ್ ಪರ್ಮನೆಂಟ್ ಪ್ರಾಜೆಕ್ಟ್ ಗಾಗಿ ರನ್ನರ್ ಅಪ್ ಅವಾರ್ಡ್, ಘಟಕದಲ್ಲಿ ಸತತವಾಗಿ ನಡೆಸಿದ ಸಮಾಜಮುಖಿ ಕಾರ್ಯಕ್ರಮಗಳಿಗಾಗಿ ವಲಯದ ಮ್ಯಾನೇಜ್‌ಮೆಂಟ್‌ ವಿಭಾಗದಿಂದ ಕೊಡಮಾಡುವ ಡೈಮಂಡ್ ಲೋ ಪ್ರಶಸ್ತಿ, ಘಟಕದಲ್ಲಿ ನಡೆಸಿದ ಅನ್ನದಾಸೋಹ ಕಾರ್ಯಕ್ರಮಕ್ಕೆ ಅಕ್ಷಯ ಪಾತ್ರ ಮನ್ನಣೆ, ರಕ್ತದಾನ ಶಿಬಿರಕ್ಕೆ ಮನ್ನಣೆ, ರಾಷ್ಟ್ರೀಯ ಕಾರ್ಯಕ್ರಮ ‘ಜಾಸ್ಮಿನ್’ ನಲ್ಲಿ ಭಾಗವಹಿಸಿರುವುದಕ್ಕೆ ಮನ್ನಣೆ, ರಾಷ್ಟ್ರೀಯ ಮಟ್ಟದ ತರಬೇತಿ ಕಾರ್ಯಕ್ರಮಕ್ಕೆ ಮನ್ನಣೆ ರಾಷ್ಟ್ರೀಯ ತರಬೇತಿ ದಿನಾಚರಣೆಗೆ ಮನ್ನಣೆ, ಒಂದು ಘಟಕ – ಒಂದು ಸುಸ್ಥಿರ ಯೋಜನೆಗೆ ಮನ್ನಣೆ, ಕೋವಿಡ್ ವಾರಿಯರ್ ಗಳಿಗೆ ನಡೆಸಿದ ಸಲ್ಯೂಟ್ ದ ಸೈಲೆಂಟ್ ವರ್ಕರ್ ಕಾರ್ಯಕ್ರಮಕ್ಕೆ ಮನ್ನಣೆ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದುಕೊಳ್ಳುವಲ್ಲಿ ಜೇಸಿಐ ಕಡಬ ಕದಂಬ ಘಟಕವು ಯಶಸ್ವಿಯಾಗಿದೆ.

Also Read  ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಾಗಿ ಹಮೀದ್ ತಂಙಳ್ ಮರ್ಧಾಳ ನೇಮಕ

 

 

error: Content is protected !!
Scroll to Top