(ನ್ಯೂಸ್ ಕಡಬ) newskadaba.com ಕಡಬ, ಮೇ.28. ರಸ್ತೆ ಬದಿಯ ಅಂಗಡಿಯೊಂದರ ಹಿಂಭಾಗದಲ್ಲಿ ಇಡಲಾಗಿದ್ದ ಕಬ್ಬನ್ನು ಕಾಡಾನೆಯೊಂದು ತಿನ್ನುತ್ತಿರುವ ದೃಶ್ಯ ಗುಂಡ್ಯ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮಣಿಭಾಂಡ ಎಂಬಲ್ಲಿ ಶನಿವಾರ ರಾತ್ರಿ ಕಂಡುಬಂದಿದೆ.
ಕೊಂಬಾರು ನಿವಾಸಿಯೋರ್ವರು ಸುಬ್ರಹ್ಮಣ್ಯದಲ್ಲಿ ಕರ್ತವ್ಯ ನಿರ್ವಹಿಸಿ ಶನಿವಾರ ರಾತ್ರಿ 10.30ರ ಸುಮಾರಿಗೆ ಮನೆಗೆ ಹಿಂತಿರುಗುತ್ತಿದ್ದ ವೇಳೆ ಮಣಿಭಾಂಡ ಎಂಬಲ್ಲಿ ಜ್ಯೂಸ್ ಅಂಗಡಿಯ ಪಕ್ಕದಲ್ಲಿ ಕಾಡಾನೆಯೊಂದು ಕಬ್ಬು ತಿನ್ನುತ್ತಿರುವುದು ಕಂಡುಬಂದಿದ್ದು, ಕೂಡಲೇ ತನ್ನ ಮೊಬೈಲ್ ಮೂಲಕ ವೀಡಿಯೋ ಮಾಡಿದ್ದಾರೆ.
Also Read ಯುವ ಜನರಿಗೆ ಕೌಶಲ್ಯಭಿವೃದ್ಧಿ ತರಬೇತಿಗಳನ್ನು ನೀಡಲು ಒತ್ತು ನೀಡಬೇಕು ➤ ಅಪರ ಜಿಲ್ಲಾಧಿಕಾರಿ ಎಮ್. ಜೆ. ರೂಪ