ಹಾರ ಬದಲಿಸುವ ವೇಳೆ ವರನ ಕೈ ವಧುವಿನ ಕೊರಳಿಗೆ ತಾಗಿತೆಂದು ವರಸೆ ➤ ಬೆಳ್ತಂಗಡಿಯಲ್ಲಿ ಮುರಿದು ಬಿದ್ದ ಮದುವೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ.29. ಹಾರ ಬದಲಿಸುವ ವೇಳೆ ವರನ ಕೈ ಕೊರಳಿಗೆ ತಾಗಿತೆಂದು ವಧು ಹಾರವನ್ನೇ ಎಸೆದ ಪರಿಣಾಮ ಮದುವೆ ಮುರಿದು ಬಿದ್ದ ಘಟನೆ ವೇಣೂರಿನಲ್ಲಿ ನಡೆದಿದೆ.

ಮೂಡು ಕೊಣಾಜೆಯ ಯುವತಿಯ ಮದುವೆ ನಾತಾವಿಯ ಯುವಕನೊಂದಿಗೆ ಮೇ 25 ಕ್ಕೆ ನಾರಾವಿಯ ಹಾಲ್ ನಲ್ಲಿ ನಡೆಯುತ್ತಿದ್ದ ವೇಳೆ ಅರ್ಚಕರು ಹಾರ ಬದಲಾಯಿಸುವಂತೆ ಸೂಚಿಸಿದ್ದಾರೆ. ಅದರಂತೆ ವರ ವಧುವಿನ ಕುತ್ತಿಗೆಗೆ ಹಾರ ಹಾಕುತ್ತಿದ್ದ ವೇಳೆ ಕೊರಳಿಗೆ ಕೈ ತಾಗಿತೆಂದು ವಧು ವರಸೆ ತೆಗೆದು ಮಂಟಪದಿಂದ ಹೊರ ನಡೆಯಲು ಮುಂದಾಗಿದ್ದಾಳೆ. ಈ ವೇಳೆ ಈ ವೇಳೆ ಸಂಬಂಧಿಕರು ಸಮಾಧಾನಪಡಿಸಿದರೂ, ಅವಮಾನಕ್ಕೊಳಗಾದ ವರನ ಕಡೆಯವರು ಮದುವೆಯನ್ನು ನಿರಾಕರಿಸಿದ್ದಾರೆ. ಆ ಬಳಿಕ ಎರಡೂ ಕಡೆಯವರಲ್ಲಿ ಮಾತಿಗೆ ಮಾತು ಬೆಳೆದು ಜಗಳದ ಹಂತಕ್ಕೆ ತಲುಪಿದಾಗ ವೇಣೂರು ಪೊಲೀಸರು ಸ್ಥಳಕ್ಕಾಗಮಿಸಿದ್ದು, ಎರಡೂ ಕಡೆಯವರಿಗೆ ಮಾತುಕತೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸಂಬಂಧ ಬೆಸೆಯದ ಕಾರಣ ಮದುವೆ ಅರ್ಧಕ್ಕೆ ನಿಂತು ಹೋಗಿದ್ದು, ತಯಾರಿಸಲಾಗಿದ್ದ ಊಟವನ್ನು ಸ್ಥಳೀಯ ಶಾಲೆಗಳಿಗೆ ನೀಡಿದ್ದಾರೆ.

Also Read  Big Breaking News ➤ ಹಿಜಾಬ್ ಇಸ್ಲಾಂ ನ ಅತ್ಯಗತ್ಯ ಭಾಗವಲ್ಲ- ಹೈಕೋರ್ಟ್ ಮಹತ್ವದ ತೀರ್ಪು..!!

 

error: Content is protected !!