ಟಿಪ್ಪು ಜಯಂತಿ ಆಚರಣೆಗಾಗಿ ಉಡುಪಿಯಲ್ಲಿ ನಿಷೇಧಾಜ್ಞೆ ಜಾರಿ ► ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ – ಕೋಟ ಶ್ರೀನಿವಾಸ ಪೂಜಾರಿ

(ನ್ಯೂಸ್ ಕಡಬ) newskadaba.com ಉಡುಪಿ, ನ.10. ಟಿಪ್ಪು ಜಯಂತಿ ಆಚರಣೆಯ ಸಂದರ್ಭದಲ್ಲಿ ಉಡುಪಿಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿರುವುದಕ್ಕೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು ಸಿ.ಎಂ ಸಿದ್ದರಾಮಯ್ಯ ಅವರು ಇಡೀ ರಾಜ್ಯವನ್ನು ಜೈಲು ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಿಪ್ಪು ಜಯಂತಿಯನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಹೇಳಿದ ಅವರು ಟಿಪ್ಪು ಜಯಂತಿ ವಿಚಾರದಲ್ಲಿ ರಾಜ್ಯಾದ್ಯಂತ ಹತ್ಯೆ ಸಾವು ನೋವು ನಡೆದಿದೆ. ರಾಜ್ಯದಲ್ಲಿ ಶಾಂತಿಭಂಗ ಚಟುವಟಿಕೆ ಹೆಚ್ಚಾಗಿದೆ, ವಿಪಕ್ಷಗಳು, ಇತಿಹಾಸ ತಜ್ಞರೂ ಸರ್ಕಾರಕ್ಕೆ ಸಾಕಷ್ಟು ಬುದ್ದಿಮಾತು ಹೇಳಿವೆ. ಆದರೂ ಸರಕಾರ ಟಿಪ್ಪುಜಯಂತಿ ಆಚರಣೆಗೆ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Also Read  ಬೆಳ್ತಂಗಡಿ : ಸ್ವಂತ ಅಣ್ಣನಿಂದಲೇ ದೌರ್ಜನ್ಯಕ್ಕೆ ಒಳಗಾದ ತಂಗಿ ➤ ಏಳು ತಿಂಗಳ ಗರ್ಭಿಣಿಯಾದ ಬಾಲಕಿ..!!

ಜಿಲ್ಲಾಡಳಿತ ಉಡುಪಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವುದನ್ನು ವಿರೋಧಿಸಿದ ಕೋಟ ಶ್ರೀನಿವಾಸ ಪೂಜಾರಿ, ಸೆಕ್ಷನ್ 144 ಹಾಕಿದ್ರೂ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು. ರಾಜ್ಯದ ಎಲ್ಲಾ ಕಡೆ 144 ಸೆಕ್ಷನ್ ಜಾರಿ ಆಗಿದೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಭೂಷಣವಲ್ಲ ಎಂದ ಅವರು ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ ನಡೆಸಿ ನಿಷೇಧಾಜ್ಞೆ ಉಲ್ಲಂಘಿಸುತ್ತೇವೆ ಎಂದು ಹೇಳಿದರು.

error: Content is protected !!
Scroll to Top