(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.27. ಹೊಸ ಬೈಕ್ ಹಾಗೂ ಕಾರು ಖರೀದಿಯ ಖುಷಿಯಲ್ಲಿದ್ದವರಿಗೆ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯವು ಬಿಗ್ ಶಾಕ್ ನೀಡಿದ್ದು, ಥರ್ಡ್ ಪಾರ್ಟಿ ಇನ್ಶುರೆನ್ಸ್ ವೆಚ್ಚವನ್ನು ಹೆಚ್ಚಿಸಲು ನಿರ್ಧರಿಸಿದೆ.
ಕೇಂದ್ರದ ಹೊಸ ನಿರ್ಧಾರದಿಂದ ರಾಷ್ಟ್ರದಾದ್ಯಂತ ಹೊಸ ವಾಹನಗಳ ಖರೀದಿ ದುಬಾರಿಯಾಗಲಿವೆ. ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರೀಮಿಯಂ ಮೊತ್ತವನ್ನು ಹೆಚ್ಚಳ ಮಾಡಿರುವ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯವು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಹೊಸ ಆದೇಶದಂತೆ ಜೂನ್ 01 ರಿಂದಲ್ಲೇ ಹೊಸ ದರ ಜಾರಿಗೆ ಬರಲಿದ್ದು, 2019-20 ರಲ್ಲಿ 1000 ಸಿಸಿ ಎಂಜಿನ್ ಸಾಮರ್ಥ್ಯದ ಖಾಸಗಿ ಕಾರುಗಳಿಗಿದ್ದ ಪ್ರೀಮಿಯಂ ದರ 2,072 ಬದಲಾಗಿ 2,094 ರೂಪಾಯಿಗೆ ಏರಿಕೆ ಆಗಲಿದೆ. 1000 -1500 ಸಿಸಿ ಎಂಜಿನ್ ಸಾಮರ್ಥ್ಯದ ಕಾರುಗಳ ಪ್ರೀಮಿಯಂ 3221 ರೂಪಾಯಿಗಳಿಂದ 3,416 ರೂಪಾಯಿಗೆ ಏರಿಕೆಯಾಗಲಿದೆ. ಹೈಬ್ರಿಡ್ ಎಲೆಕ್ಟ್ರಿಕಲ್ ವಾಹನಗಳಿಗೆ ಶೇ.7.5ರಷ್ಟು ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ.