ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆಯಲ್ಲಿ ಭಾರೀ ಇಳಿಕೆ ➤ ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ ಸರಕಾರ

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.21. ಕೇಂದ್ರ ಸರಕಾರವು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯ ಜೊತೆಗೆ ಅಡುಗೆ ಅನಿಲದ ಬೆಲೆಯನ್ನು ಕಡಿತಗೊಳಿಸಿ ಆದೇಶಿಸಿದೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿದ್ದು, ಅದರಂತೆ ಪೆಟ್ರೋಲ್‌ ಬೆಲೆ ಲೀಟರಿಗೆ 9.5 ರೂ. ಹಾಗೂ ಡೀಸೆಲ್‌ 7 ರೂ. ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಅಡುಗೆ ಅನಿಲ ಸಿಲಿಂಡರ್​ಗೆ 200 ರೂ. ಸಹಾಯಧನ ನೀಡುವುದಾಗಿ ಘೋಷಿಸಿದ್ದು, ವರ್ಷಕ್ಕೆ 12 ಸಿಲಿಂಡರ್​ವರೆಗೆ ಸಬ್ಸಿಡಿ ದೊರೆಯಲಿದೆ.

Also Read  ನಾಳೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂಸವಾರಿ

 

 

error: Content is protected !!
Scroll to Top