ಈ ವರ್ಷದ ಟಿಪ್ಪು ಜಯಂತಿ ಕೊನೆಯ ಟಿಪ್ಪು ಜಯಂತಿ ಆಗಲಿದೆ ► ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ

(ನ್ಯೂಸ್ ಕಡಬ) newskadaba.com ಮಂಗಳೂರು ನ.10. ಇಂದು ನಡೆಯುವ ಟಿಪ್ಪು ಜಯಂತಿ ರಾಜ್ಯದಲ್ಲಿ ನಡೆಯುವ ಕೊನೆಯ ಟಿಪ್ಪುಜಯಂತಿ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಅವರು ಗುರುವಾರದಂದು ಮಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹಿಟ್ಲರ್ ಜಯಂತಿಯೂ ಒಂದೇ, ಟಿಪ್ಪು ಜಯಂತಿಯೂ ಒಂದೇ ಎಂದು ಹೇಳಿದರು.

ಸರಕಾರಿ ಕಾರ್ಯಕ್ರಮವಾಗಿ ಟಿಪ್ಪು ಜಯಂತಿಗೆ ವಿರೋಧ ವಿದ್ದು ಇದೇ ಕೊನೆಯ ಟಿಪ್ಪು ಜಯಂತಿ ಆಗಲಿದೆ ಎಂದು ಅವರು ಹೇಳಿದರು. ಡಿ.ಕೆ ಶಿವಕುಮಾರ್ ಬಿಜೆಪಿ ಸೇರ್ಪಡೆ ಕುರಿತಂತೆ ಮಾತನಾಡಿದ ಯಡಿಯೂರಪ್ಪ ಬಿಜೆಪಿಗೆ ಡಿಕೆಶಿ ಸೇರುವ ವಿಚಾರ ಸುಳ್ಳು, ಆ ರೀತಿಯ ಯಾವುದೇ ಪ್ರಸ್ತಾಪ ಪಕ್ಷದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು. ಸಿ.ಎಂ ಸಿದ್ದರಾಮಯ್ಯ ಅವರ ರಾಜಕೀಯದ ಡೊಂಬರಾಟದ ಭಾಗವಾಗಿ ಈ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

Also Read  ಆಧಾರ್ ಉಚಿತ ಅಪ್ಡೇಟ್ ಗೆ ಸೆ. 14 ಕೊನೆಯ ದಿನ...!

ರಾಜ್ಯದ ಜನತೆಯಲ್ಲಿ ಗೊಂದಲ ಸೃಷ್ಠಿಸಲು ಸುಳ್ಳು ಹೇಳಿಕೆಗಳನ್ನು ಮುಖ್ಯಮಂತ್ರಿ ನೀಡುತ್ತಿದ್ದಾರೆ. ಬಿಜೆಪಿ ಪರಿವರ್ತನಾ ರ್ಯಾಲಿ ಸಿಕ್ಕ ಬೆಂಬಲಕ್ಕೆ ಹೆದರಿ ಈ ರೀತಿಯ ಹೇಳಿಕೆಗಳನ್ನು ಮಾತನಾಡುತ್ತಿದ್ದಾರೆ ಎಂದು ಹೇಳಿದರು.

error: Content is protected !!
Scroll to Top