ಮರ್ಧಾಳ: ಮೂರು ತಿಂಗಳ ಹಿಂದೆ ಮನೆ ಕಳ್ಳತನ ಪ್ರಕರಣ ➤ ಓರ್ವ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಮೇ.10. ಮೂರು ತಿಂಗಳ ಹಿಂದೆ ಠಾಣಾ ವ್ಯಾಪ್ತಿಯ ಬಂಟ್ರ ಗ್ರಾಮದ
ಪಾಲೆತ್ತಡ್ಕ ಎಂಬಲ್ಲಿ ಮನೆಗೆ ನುಗ್ಗಿ ನಗದು
ಕಳವುಗೈದಿರುವ ಆರೋಪಿಯನ್ನು ಕಡಬ
ಪೋಲೀಸರು ಸೋಮವಾರದಂದು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮರ್ದಾಳ ನಿವಾಸಿ ಹಕೀಂ (23) ಎಂದು
ಗುರುತಿಸಲಾಗಿದೆ. ಹಕೀಂಗೆ ಕಳ್ಳತನಕ್ಕೆ ಸಹಕರಿಸಿದ
ಇನ್ನೋರ್ವ ಆರೋಪಿ ಹಮೀದ್(25) ನನ್ನು ಇನ್ನೊಂದು
ಪ್ರಕರಣದಲ್ಲಿ ಬೆಂಗಳೂರಿನ ಪೋಲೀಸರು ಬಂಧಿಸಿದ್ದು,
ಅವರನ್ನು ಕಡಬ ಪೋಲಿಸರು ಇನ್ನಷ್ಟೇ ವಶಕ್ಕೆ ಪಡೆಯಬೇಕಿದೆ. ಫೆಬ್ರವರಿ 22 ರಂದು ರಾತ್ರಿ ಪಾಲೆತ್ತಡ್ಕ ನಿವಾಸಿ ಬಾಲಕೃಷ್ಣ ರೈ
ಎಂಬವರ ಮನೆಯ ಹಿಂಬಾಗಿಲಿನಿಂದ ನುಗ್ಗಿ ಮನೆಯಲ್ಲಿದ್ದ
66000 ರೂ. ವನ್ನು ಕಳವುಗೈಯ್ಯಲಾಗಿತ್ತು. ಬಾಲಕೃಷ್ಣ ರೈ ಅವರಿಗೆ ಮರ್ದಾಳ ದಲ್ಲಿ ಅಂಗಡಿ ಇದ್ದು, ಇವರ ಚಲನವಲನಗಳ ಮೇಲೆ ನಿಗಾ ಇಟ್ಟು ಸಮಯ ಸಾಧಿಸಿ ಕಳ್ಳತನಗೈಯ್ಯಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಕಡಬ ಎಸ್‌ಐ ಆಂಜನೇಯ ರೆಡ್ಡಿ ಮಾರ್ಗದರ್ಶನದಲ್ಲಿ ತನಿಖಾ ಎಸ್‌ಐ ಶ್ರೀಕಾಂತ್ ರಾಥೋಡ್, ಪೋಲೀಸ್ ಸಿಬ್ಬಂದಿಗಳಾದ ರಮೇಶ್, ಮಹೇಶ್, ಭವಿತ್, ದೀಪಕ್ ಮತ್ತಿತರರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಬೆಂಗಳೂರಿಗೆ ವರ್ಗಾವಣೆ ➤ ನೂತನ ವೃತ್ತ ನಿರೀಕ್ಷಕರಾಗಿ ನವೀನ್ ಚಂದ್ರ ನೇಮಕ

 

 

error: Content is protected !!
Scroll to Top