ಕಾರು ಚಲಾಯಿಸುತ್ತಿದ್ದ ವೇಳೆ ರಕ್ತದೊತ್ತಡ ಹೆಚ್ಚಾಗಿ ಮರಕ್ಕೆ ಢಿಕ್ಕಿ ➤ ಕಡಬ ಕಾಲೇಜಿನ ಉಪನ್ಯಾಸಕರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಮೇ.07. ಕಾರನ್ನು ಚಲಾಯಿಸುತ್ತಿದ್ದ ವೇಳೆ ರಕ್ತದೊತ್ತಡ ಹೆಚ್ಚಾದ ಪರಿಣಾಮ ನಿಯಂತ್ರಣ ಕಳೆದ ಕಾರು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಘಟನೆ ಕಡಬ – ಪಂಜ ರಸ್ತೆಯ ಮೆಸ್ಕಾಂ ಸಮೀಪ ಶುಕ್ರವಾರ ಸಂಜೆ ನಡೆದಿದೆ.

ಕಡಬ ಸ.ಪ.ಪೂ.ಕಾಲೇಜಿನ ಉಪನ್ಯಾಸಕ ವಾಸುದೇವ ಕೋಲ್ಪೆಯವರು ತನ್ನ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮೆಸ್ಕಾಂ ಸಮೀಪ ರಕ್ತದೊತ್ತಡ ಹೆಚ್ಚಾದ ಪರಿಣಾಮ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಉಪನ್ಯಾಸಕ ವಾಸುದೇವರವರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ.

Also Read  ಇನ್ನುಮುಂದೆ ಜಿಲ್ಲೆಯಲ್ಲಿ ಅಧಿಕಾರಿಗಳು ಹಣದ ಬೇಡಿಕೆಯಿಟ್ಟರೆ ನಿರ್ದಾಕ್ಷಿಣ್ಯ ಕ್ರಮ ➤ ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲು ಖಡಕ್ ವಾರ್ನಿಂಗ್.!!

 

 

error: Content is protected !!
Scroll to Top