ಅಕ್ರಮ ಕಸಾಯಿಖಾನೆಗೆ ಕಡಬ ಪೊಲೀಸರಿಂದ ದಾಳಿ ➤ ತಲೆ‌ಕಡಿದ ದನ, ಜಾನುವಾರುಗಳು ವಶಕ್ಕೆ, ಆರೋಪಿಗಳು ಪರಾರಿ

(ನ್ಯೂಸ್ ಕಡಬ) newskadaba.com ಕಡಬ, ಮೇ.01. ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿರುವ ಕಡಬ ಪೊಲೀಸರು ತಲೆ ಕಡಿದ ದನ ಹಾಗೂ ಮಾಂಸಕ್ಕಾಗಿ ತಂದಿದ್ದ ಜಾನುವಾರುಗಳನ್ನು ವಶಪಡಿಸಿಕೊಂಡ ಘಟನೆ ಭಾನುವಾರದಂದು ಕಡಬದಲ್ಲಿ ನಡೆದಿದೆ.

ಕಡಬ ಕಳಾರ ಸಮೀಪದ ತಿಮರಡ್ಡ ಎಂಬಲ್ಲಿ ಜಾನುವಾರುಗಳನ್ನು ಮಾಂಸ ಮಾಡಲಾಗುತ್ತಿದೆ ಎಂಬ ದೂರಿ‌ನ ಮೇರೆಗೆ ದಾಳಿ ನಡೆಸಿರುವ ಕಡಬ ಎಸ್ಐ ಆಂಜನೇಯ ರೆಡ್ಡಿ, ಎಎಸ್ಐ ಸುರೇಶ್ ಹಾಗೂ ಸಿಬ್ಬಂದಿಗಳು ಕೊಲ್ಲಲ್ಪಟ್ಟ ಒಂದು ದನ ಹಾಗೂ ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಫಾರೂಕ್ ಹಾಗೂ ಇನ್ನಿತರರು ಸ್ಥಳದಿಂದ ಪರಾರಿಯಾಗಿದ್ದು, ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ? ನ್ಯಾಯಾಲಯದಿಂದ ಹಿಂತಿರುಗುತ್ತಿದ್ದ ಇಬ್ಬರು ಆರೋಪಿಗಳ ಬರ್ಬರ ಕೊಲೆ..!

 

 

error: Content is protected !!
Scroll to Top