ಜೂನ್ ಅಂತ್ಯದ ವೇಳೆಗೆ ರಾಜ್ಯದಲ್ಲಿ ಕೊರೋ‌ನಾ ನಾಲ್ಕನೇ ಅಲೆ ➤ ಆರೋಗ್ಯ ಸಚಿವ ಡಾ| ಸುಧಾಕರ್ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.27. ರಾಜ್ಯದಲ್ಲಿ ಜೂನ್ ಅಂತ್ಯದ ವೇಳೆಗೆ ಕೊರೋನಾ ಉಲ್ಬಣಗೊಳ್ಳಲಿದ್ದು, ಅಕ್ಟೋಬರ್ ವರೆಗೆ ಮುಂದುವರಿಯಲಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಈ ಬಗ್ಗೆ ಮಂಗಳವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ದೇಶಾದ್ಯಂತ ಕೊರೋ‌ನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಜೂನ್ ವೇಳೆಗೆ ಕೊರೋನಾ ನಾಲ್ಕನೇ ಅಲೆ‌ ಬರುವ ಬಗ್ಗೆ ಕಾನ್ಪುರದ ಐಐಟಿ ವಿಶ್ವವಿದ್ಯಾಲಯವು ಎಚ್ಚರಿಕೆ ನೀಡಿತ್ತು. ಇದೀಗ ಅದಕ್ಕೂ ತಿಂಗಳ‌ ಮುಂಚಿತವಾಗಿ ಕೊರೋನಾ ಹೆಚ್ಚಳವಾಗುತ್ತಿದ್ದು, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಮುನ್ನೆಚ್ಚರಿಕೆ ವಹಿಸಬೇಕು ಎಂದವರು ಸೂಚಿಸಿದ್ದಾರೆ.

Also Read  ರಿಕ್ಷಾ ದಲ್ಲಿ ತೆರಳುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ ಹಿನ್ನೆಲೆ ➤ ಓರ್ವ ಅರೆಸ್ಟ್

 

 

error: Content is protected !!
Scroll to Top