ಹೆದ್ದಾರಿ ಬದಿ ಜೊತೆಯಾಗಿ ಸಿಕ್ಕಿಬಿದ್ದ ಮುಸ್ಲಿಂ ಯುವಕ – ಹಿಂದೂ ಯುವತಿ ➤ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಹಿಂದೂ ಪರ ಸಂಘಟನೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಎ.05. ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಯನ್ನು ಆಟೋರಿಕ್ಷಾದಲ್ಲಿ ಕರೆದುಕೊಂಡು ಬಂದು ಕಾಡಿನ ಬದಿಯಲ್ಲಿ ಜೊತೆಗಿರುವುದನ್ನು ಗಮನಿಸಿದ ಹಿಂದೂ ಪರ ಸಂಘಟನೆಯ ಸದಸ್ಯರು ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರದಂದು ಗುಂಡ್ಯದಲ್ಲಿ ನಡೆದಿದೆ.

ವೇಣೂರು ಮೂಲದ ಹಿಂದೂ ಧರ್ಮಕ್ಕೆ ಸೇರಿದ ಯುವತಿ ಹಾಗೂ ಪುತ್ತೂರಿನಲ್ಲಿ ಆಟೋ ಚಾಲಕನಾಗಿರುವ ಮುಸ್ಲಿಂ ಯುವಕ ಮಂಗಳವಾರದಂದು ರಿಕ್ಷಾದಲ್ಲಿ ಗುಂಡ್ಯಕ್ಕೆ ಆಗಮಿಸಿದ್ದು, ದೇರಣೆ ಕ್ರಾಸ್ ಸಮೀಪ ಕಾಡು ರಸ್ತೆಯಲ್ಲಿ ಜೊತೆಗಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಭಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ, ಜೋಡಿಯನ್ನು ನೆಲ್ಯಾಡಿ ಹೊರಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Also Read  ಕೊಯಿಲ: ಗ್ರಾ.ಪಂ. ಉಪ ಚುನಾವಣೆ ► ಬಿಜೆಪಿ ಬೆಂಬಲಿತ ಅಭ್ಯರ್ಥಿ ಲಿಂಗಪ್ಪ ಕುಂಬಾರ ಗೆಲುವು

 

 

error: Content is protected !!
Scroll to Top