ಕಡಬ: ಪಾಲೋಳಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಎ.03. ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಕಡಬ ಸಮೀಪದ ಪಿಜಕ್ಕಳ ಎಂಬಲ್ಲಿ ಭಾನುವಾರ ಅಪರಾಹ್ನ ಸಂಭವಿಸಿದೆ.

ಮೃತ ಬಾಲಕನನ್ನು ನರಿಮೊಗರು ಐಟಿಐ ನ ವಿದ್ಯಾರ್ಥಿ ಕಡಬ ಹೈಸ್ಕೂಲ್ ಬಳಿಯ ನಿವಾಸಿ ನಾವೂರ ಎಂಬವರ ಪುತ್ರ ನಿತೇಶ್ ಎಂದು ಗುರುತಿಸಲಾಗಿದೆ. ಈತ ತನ್ನ ಸ್ನೇಹಿತರೊಂದಿಗೆ ಪಾಲೋಳಿ ನದಿಯಲ್ಲಿ ನೀರಿಗಿಳಿದಿದ್ದ ವೇಳೆ ಮುಳುಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಈ ಬಗ್ಗೆ ಕಡಬ ಠಾಣೆಗೆ ಮಾಹಿತಿ ನೀಡಲಾಗಿದೆ.

Also Read  ಕಡಬ: ಕಾಲೇಜು ವಿದ್ಯಾರ್ಥಿನಿಯರಿಗೆ ಆ್ಯಸಿಡ್ ಎರಚಿದ ಪ್ರಕರಣ ಆರೋಪಿಯ ಜಾಮೀನು ಅರ್ಜಿ ವಜಾ

 

 

error: Content is protected !!
Scroll to Top