One Plus ಬಳಕೆದಾರರಿಗೆ ಶಾಕಿಂಗ್ ಸುದ್ದಿ ➤ ಮಾತನಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಸ್ಫೋಟಗೊಂಡ ಒನ್ ಪ್ಲಸ್ Nord 2

(ನ್ಯೂಸ್ ಕಡಬ) newskadaba.com ನವದೆಹಲಿ, ಎ.03. ಒನ್ ಪ್ಲಸ್ ಮೊಬೈಲ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ಹೊರಬಂದಿದ್ದು, One Plus ಬ್ರ್ಯಾಂಡ್ ನ Nord 2 ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಕೈಯಲ್ಲೇ ಸ್ಪೋಟಗೊಂಡ ಬಗ್ಗೆ ಸಾಫ್ಟ್‌ವೇರ್ ಇಂಜಿನಿಯರ್ ಓರ್ವರು ಟ್ವೀಟ್ ಮಾಡಿದ್ದಾರೆ.

ಲಕ್ಷಯ್ ವರ್ಮಾ ಎಂಬ ಸಾಫ್ಟ್‌ವೇರ್ ಇಂಜಿನಿಯರ್ ನ ಸಹೋದರ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಮೊಬೈಲ್ ಸ್ಪೋಟಗೊಂಡ ಪರಿಣಾಮ ಅಂಗೈ ಹಾಗೂ ಮುಖಕ್ಕೆ ಗಾಯವಾಗಿದೆ. ಈ ಬಗ್ಗೆ ಲಕ್ಷಯ್ ವರ್ಮಾ ಟ್ವಿಟ್ಟರ್ ನಲ್ಲಿ ಫೋಟೋ ಹಂಚಿಕೊಂಡಿದ್ದು, ತನಿಖೆ ನಡೆಸುವುದಾಗಿ ಕಂಪೆನಿಯು ಪ್ರತಿಕ್ರಿಯಿಸಿದೆ. ಇದ್ದಕ್ಕಿದ್ದಂತೆ ಮೊಬೈಲ್ ಸ್ಫೋಟಗೊಂಡಿರುವುದು ಬಳಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿಂದೆಯೂ ಎರಡು ಬಾರಿ ಇದ್ದಕ್ಕಿದ್ದಂತೆ ಒನ್ ಪ್ಲಸ್ ಬ್ರ್ಯಾಂಡ್ ನ ಮೊಬೈಲ್ ಸ್ಫೋಟಗೊಂಡಿತ್ತು.

Also Read  ಆಸ್ಪತ್ರೆಯಲ್ಲಿರುವ ಒಡತಿಗಾಗಿ ನರ್ಸಿಂಗ್ ಹೋಂ ಮುಂದೆ ಕಾದು ಕುಳಿತ ನಾಯಿ !!

 

 

 

error: Content is protected !!
Scroll to Top