ಕಡಬ: ಪರ್ಸ್ ಎಗರಿಸಿದ ಅಪ್ರಾಪ್ತ ಬಾಲಕರು ➤ ಹಿಡಿದು ಪೋಲಿಸರಿಗೊಪ್ಪಿಸಿದ ಸ್ಥಳೀಯರು

(ನ್ಯೂಸ್ ಕಡಬ) newskadaba.com ಕಡಬ, ಮಾ.31. ಇಲ್ಲಿನ ಕೇವಳ ಎಂಬಲ್ಲಿ ಅಟೋ ರಿಕ್ಷಾದಲ್ಲಿದ್ದ ವ್ಯಕ್ತಿಯೋರ್ವರ ಪರ್ಸನ್ನು ಅಪ್ರಾಪ್ತ ಬಾಲಕರಿಬ್ಬರು ಎಗರಿಸಿ ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಅವರನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ಪೋಲಿಸರಿಗೆ ಒಪ್ಪಿಸಿದ ಘಟನೆ ಕಡಬದಲ್ಲಿ ನಡೆದಿದೆ.

ಪರ್ಸ್ ಎಗರಿಸಿದ ಅಪ್ತಾಪ್ತ ಬಾಲಕರು ಕುಂತೂರು ಸಮೀಪದವರೆಂದು ತಿಳಿದು ಬಂದಿದ್ದು, ಈ ಬಾಲಕರು ಕಡಬ ಸಮೀಪದ ಕೇವಳದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಅಲ್ಲಿಯ ವ್ಯಕ್ತಿಯೋರ್ವರು ಅಟೋ ರಿಕ್ಷಾದಲ್ಲಿ ಬಂದಿದ್ದು ಅವರು ತಮ್ಮ ಸ್ನೇಹಿತರೋರ್ವರ ಜತೆ ಮಾತನಾಡುತ್ತಿದ್ದಾಗ ಆ ವ್ಯಕ್ತಿಯ ಪರ್ಸನ್ನು ಈ ಬಾಲಕರು ಎಗರಿಸಿ ಪರಾರಿಯಾಗಿದ್ದಾರೆ. ಕೂಡಲೇ ಬಾಲಕರನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ಪೋಲಿಸರ ವಶಕ್ಕೆ ಕೊಡಲಾಯಿತು. ವಶಕ್ಕೆ ಪಡೆದ ಪೋಲಿಸರು ಬಾಲಕರನ್ನು ವಿಚಾರಿಸಿ ಬಳಿಕ ಅವರನ್ನು ಅವರ ಪೋಷಕರ ಜತೆ ಕಳುಹಿಸಿಕೊಟ್ಟಿದ್ದಾರೆ.

Also Read  ಮಾಣಿ: ಖಾಸಗಿ ಬಸ್ಸುಗಳಿಗೆ ಕಲ್ಲೆಸೆದ ದುಷ್ಕರ್ಮಿಗಳು ➤ ಮೂರು ಬಸ್ಸುಗಳಿಗೆ ಹಾನಿ

 

 

 

error: Content is protected !!
Scroll to Top