ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ರುಕ್ಮನಾಯ್ಕ್ ಬೆಳ್ಳಾರೆ ಠಾಣೆಗೆ ವರ್ಗಾವಣೆ ➤ ಕಡಬ ಠಾಣೆಗೆ ನೂತನ ಎಸ್ಐ ಆಗಿ ಬೆಳ್ಳಾರೆ ಠಾಣೆಯ ಆಂಜನೇಯ ರೆಡ್ಡಿ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಮಾ.30. ಕಳೆದೆರಡು ವರ್ಷಗಳಿಂದ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರುಕ್ಮ‌ನಾಯ್ಕ್ ಅವರನ್ನು ಬೆಳ್ಳಾರೆ ಠಾಣೆಗೆ ವರ್ಗಾಯಿಸಿ ಪಶ್ಚಿಮ ವಲಯ ಐಜಿಪಿ ಕಛೇರಿ ಆದೇಶ ಹೊರಡಿಸಿದೆ.

ಕಡಬ ಠಾಣಾ ನೂತನ ಸಬ್ ಇನ್ಸ್‌ಪೆಕ್ಟರ್ ಆಗಿ ಬೆಳ್ಳಾರೆ ಠಾಣಾ ಎಸ್ಐ ಆಂಜನೇಯ ರೆಡ್ಡಿಯವರನ್ನು ನೇಮಕ ಮಾಡಲಾಗಿದ್ದು, ಇವರಿಬ್ಬರ ಕಾರ್ಯ ಸ್ಥಳವನ್ನು ಪರಸ್ಪರ ಅದಲು ಬದಲಾಯಿಸಲಾಗಿದೆ. ಆದೇಶ ಪ್ರತಿ ಸಿಕ್ಕಿದ ತಕ್ಷಣವೇ ನಿಯೋಜಿಸಿದ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಲು ವರದಿ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

Also Read  ಉಡುಪಿ :ಅಂಗಡಿಯ ಮುಂಭಾಗವೇ ಆತ್ಮಹತ್ಯೆಗೆ ಶರಣಾದ ಯುವಕ

 

 

error: Content is protected !!
Scroll to Top