ಕೋಡಿಂಬಾಳ: SSF & SYS ವತಿಯಿಂದ ತಾಜುಲ್ ಉಲಮಾ 9ನೇ ಆಂಡ್ ನೇರ್ಚೆ ➤ ಸುನ್ನೀ ಉಲಮಾಗಳ ಅನುಸ್ಮರಣೆ

(ನ್ಯೂಸ್ ಕಡಬ) newskadaba.com ಕಡಬ, ಮಾ. 20. ಎಸ್ಸೆಸ್ಸೆಫ್ ಮತ್ತು ಎಸ್ ವೈಎಸ್ ಕೋಡಿಂಬಾಳ (ರಿ.) ವತಿಯಿಂದ ತಾಜುಲ್ ಉಲಮಾ 9ನೇ ಆಂಡ್ ನೇರ್ಚೆ ಹಾಗೂ ಅಗಲಿದ ನೂರುಲ್ ಉಲಮಾ, ಶಂಸುಲ್ ಉಲಮಾ, ಕಣ್ಣಿಯತ್ ಉಸ್ತಾದ್, ತಾಜುಶ್ಯರೀಅ ಆಲಿಕುಂಞಿ ಉಸ್ತಾದ್ ಹಾಗೂ ಸುನ್ನೀ ಉಲಮಾಗಳ ಅನುಸ್ಮರಣಾ ಕಾರ್ಯಕ್ರಮವು ಕೋಡಿಂಬಾಳ ರಹ್ಮಾನಿಯ ಜುಮಾ ಮಸ್ಜಿದ್ ನಲ್ಲಿ ಇಂದು (ಮಾ.20) ರಾತ್ರಿ ನಡೆಯಲಿದೆ.

 

ತಾಜ್ ಲ್ ಫುಖಹಾಅ್ ಬೇಕಲ್ ಉಸ್ತಾದ್ ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಡಿಂಬಾಳ ಮಸೀದಿಯ ಅಧ್ಯಕ್ಷರಾದ ಶರೀಫ್ ಕೆ.ಎಸ್. ವಹಿಸಲಿದ್ದು, ಬಹು| ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ ದುವಾಶೀರ್ವಚನ ನೆರವೇರಿಸಲಿದ್ದಾರೆ. ಅತಾವುಲ್ಲಾ ಹಿಮಮಿ ಸಖಾಫಿ ಕುಪ್ಪೆಟ್ಟಿಯವರು ಮುಖ್ಯ ಪ್ರಭಾಷಣಗೈಯಲಿದ್ದು, ಮಾಸ್ಟರ್ ಸಾಬಿತ್ ಮಂಚಿ ಹಾಗೂ ಮಾಸ್ಟರ್ ಮಹಮ್ಮದ್ ಫರ್ಹಾನ್ ಕೇಪು ರವರಿಂದ ನ’ಅತೇ ಶರೀಫ್ ನಡೆಯಲಿದೆ‌. ಈ ಸಂದರ್ಭದಲ್ಲಿ ಅಸ್ಸಯ್ಯದ್ ಕೆ.ಎಸ್.ಶಾಹುಲ್ ಹಮೀದ್ ತಂಙಳ್ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Also Read  ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಆತ್ಮಹತ್ಯೆ ➤ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಕ್ಯಾಂಪಸ್ ಫ್ರಂಟ್ ಆಗ್ರಹ

 

error: Content is protected !!
Scroll to Top