ಅರಂತೋಡು ಎಸ್ಕೆಎಸ್ಸೆಸ್ಸೆಫ್ ಶಾಖೆ ವತಿಯಿಂದ ಮನಸ್ಸನ್ನತೆ ಕಾರ್ಯಕ್ರಮ ಹಾಗೂ ಅಬ್ದುಲ್ಲಾ ಫೈಝಿಯವರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಅರಂತೋಡು, ಮಾ. 18. ಅರಂತೋಡು ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಮನಸ್ಸನ್ನತೆ ಕಾರ್ಯಕ್ರಮ ನುಸ್ರತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು.


ಇದರ ಅಧ್ಯಕ್ಷತೆಯನ್ನು ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ರಾದ ಅಶ್ರಫ್ ಗುಂಡಿ ವಹಿಸಿದ್ದರು. ನುಸ್ರತುಲ್ ಇಸ್ಲಾಂ ಮದರಸ ಸಹಾಯಕ ಅಧ್ಯಾಪಕರಾದ ಸಾಜಿದ್ ಅಝ್-ಹರಿ ಯವರು ದುವಾ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮನಸ್ಸನ್ನತೆ ಬಗ್ಗೆ ಮಾತನಾಡಿದ ಸುಳ್ಯ ವಲಯ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಅಬ್ದುಲ್ಲಾ ಫೈಝಿ ಸಂಘಟನೆ ಬೆಳೆಯಲು ಯುವಕರ ಪಾತ್ರ ಪ್ರಮುಖವಾಗಿದ್ದು ಯುವಕರು ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಪ್ರತಿಭಾವಂತರಾಗಬೇಕು. ಸಾಮಾಜಿಕ ಜಾಲತಾಣದಿಂದ ದೂರವಿದ್ದು, ಯಾವುದೇ ವಿರುದ್ದ ಕ್ಷುಲ್ಲಕ ಕಾರಣಗಳಿಂದ ಅಪರಾಧವನ್ನು ಬರದಂತೆ ಯುವಕರು ಜಾಗೃತರಾಗಬೇಕು. ಯುವಕರು ಸರ್ಕಾರಿ ಉದ್ಯೋಗದ ಕಡೆಗೆ ಪ್ರಮುಖವಾಗಿ ಗಮನ ಕೊಡಬೇಕು. ಐಎಎಸ್ ಹಾಗೂ ಐಪಿಎಸ್ ನಂತಹ ಪರೀಕ್ಷೆಗಳನ್ನು ಬರೆದು ಸಮಾಜದಲ್ಲಿ ಉನ್ನತ ಅಧಿಕಾರಿಗಳಾಗಿ ಹೊರಬರಬೇಕು ಎಂದರು. ವೇದಿಕೆಯಲ್ಲಿ ದ್ಸಿಕ್ರ್ ಸ್ವಲಾತ್ ಸಮಿತಿ ಉಪಾಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್, ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ಮ್ಯಾನೇಜ್‌ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ, ಸುಳ್ಯ ಎಸ್ ಕೆ ಎಸ್ ಎಸ್ ಎಫ್ ಕ್ಲಸ್ಟರ್ ಕಾರ್ಯದರ್ಶಿ ತಾಜುದ್ದೀನ್ ಅರಂತೋಡು, ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಅಶೀಕ್ ಕುಕ್ಕುಂಬಳ, ಮಾಜಿ ಕಾರ್ಯದರ್ಶಿ ಜುಬೈರ್ ಮೊದಲಾದವರು ಉಪಸ್ಥಿತರಿದ್ದರು. ಅರಂತೋಡು ಶಾಖೆಗೆ ಪ್ರಥಮ ಬಾರಿಗೆ ಆಗಮಿಸಿದ ಸುಳ್ಯ ವಲಯ ಅಧ್ಯಕ್ಷರಾದ ಅಬ್ದುಲ್ಲಾ ಫೈಝಿ ಪೈಂಬಚ್ಚಾಲ್ ರವರನ್ನು ಶಾಖೆ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಆಶೀಕ್ ಕುಕ್ಕುಂಬಳ ಸ್ವಾಗತಿಸಿ ಕಾರ್ಯದರ್ಶಿ ಮುಝಮ್ಮಿಲ್ ವಂದಿಸಿದರು.

Also Read  ಅ.17 ರಂದು ತಲಕಾವೇರಿಯಲ್ಲಿ ಬೆಳಿಗ್ಗೆ 7.03 ಗಂಟೆಗೆ ತೀರ್ಥೋದ್ಭವ

error: Content is protected !!
Scroll to Top