ಕೊಣಾಜೆ: ಅಂಗನವಾಡಿ ಸಹಾಯಕಿಗೆ ಲೈಂಗಿಕ ಕಿರುಕುಳ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಉಳ್ಳಾಲ, ಮಾ. 18. ಅಂಗನವಾಡಿ ಸಹಾಯಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಬಂಧಿಸಿದ ಘಟನೆ ಕೊಣಾಜೆ ವ್ಯಾಪ್ತಿಯಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಹರೇಕಳ ಗ್ರಾಮದ ಆಲಡ್ಕ ನಿವಾಸಿ ನಿಝಾಂ ಎಂದು ಗುರುತಿಸಲಾಗಿದೆ. ಈತನನ್ನು ಮಾ. 16ರಂದು ಹರೇಕಳ ಸಮೀಪದ ಅಂಗನವಾಡಿಯಲ್ಲಿ ಗ್ಯಾಸ್ ಸ್ಟವ್ ದುರಸ್ತಿ ಮಾಡಲೆಂದು ಕರೆಸಲಾಗಿದ್ದು, ಈ ವೇಳೆ ನಿಝಾಂ ಅಂಗನವಾಡಿ ಸಹಾಯಕಿಯನ್ನು ಹಿಂದಿನಿಂದ ತಬ್ಬಿ ಹಿಡಿದು ಬಳಿಕ ಯಾರಿಗೂ ತಿಳಿಸದಂತೆ ಸೂಚಿಸಿದ್ದಾನೆ. ಇದರಿಂದ ನೊಂದ ಸಹಾಯಕಿ ಶಿಕ್ಷಕಿಯ ಬಳಿ ತಿಳಿಸಿದ್ದು, ಅದರಂತೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ನಿಝಾಂನನ್ನು ವಶಕ್ಕೆ ಪಡೆದಿದ್ದಾರೆ.

Also Read  ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ವತಿಯಿಂದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ

error: Content is protected !!
Scroll to Top