ಮಹಿಳಾ ವೈದ್ಯೆಗೆ ಅವಮಾನ ➤ ಶಾಸಕ ಹಾಗೂ ಇತರರ ವಿರುದ್ದ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಉಡುಪಿ, ಮಾ. 18. ಇಲ್ಲಿನ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಂತ ವೈದ್ಯೆಯಾಗಿದ್ದ ಡಾ.ವೀಣಾ ನಾರಾಯಣ ಶಿಬರೂರು ಅವರನ್ನು ಅನವಶ್ಯಕವಾಗಿ ಅಂಕೋಲಾದ ಆಸ್ಪತ್ರೆಗೆ ವರ್ಗಾವಣೆ ಮಾಡಿದ ವಿಷಯಕ್ಕೆ ಸಂಬಂಧಿಸಿ ಬೈಂದೂರು ಶಾಸಕ ಬಿಎಂ.ಸುಕುಮಾರ್ ಶೆಟ್ಟಿ ಹಾಗೂ ಇತರ 12 ಮಂದಿ ವಿರುದ್ದ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.


ಶಾಸಕ ಸುಕುಮಾರ್ ಶೆಟ್ಟಿ ಅವರು ಬೈಂದೂರಿನಲ್ಲಿ ದಂತ ವೈದ್ಯೆಯಾಗಿದ್ದ ಡಾ. ವೀಣಾ ಅವರನ್ನು ಅಂಕೋಲಾಗೆ ವರ್ಗಾಯಿಸಲು ಹಾಗೂ ಅಂಕೋಲಾದ ಡಾ.ವತ್ಸಲಾ ಗೋಣಿ ಅವರನ್ನು ಬೈಂದೂರಿಗೆ ವರ್ಗಾಯಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು ಎಂದು ಆರೋಪಿಲಾಗಿದೆ. ಅಂಕೋಲಾದಲ್ಲಿ ಪಶು ಆಸ್ಪತ್ರೆಯಲ್ಲಿ ಕೆಲಸದಲ್ಲಿದ್ದ ಡಾ.ವತ್ಸಲಾ ಅವರ ಪತಿ ನಾಗರಾಜ್ ಖಾರ್ವಿ ಶಾಸಕರ ಬಳಿ ಮನವಿ ಮಾಡಿದ್ದಾರೆ. ಅಲ್ಲದೇ ಸ್ಥಳೀಯರ ಸಹಾಯವನ್ನೂ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಶಾಸಕ ಹಾಗೂ ಇತರ 12 ಮಂದಿ ವಿರುದ್ದ ಎಸ್ಸಿ ಎಸ್ಡಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

Also Read  ರಾಷ್ಟ್ರೀಯ ಆಯುರ್ವೇದ ದಿನಾಚರಣೆ; ಅಸಮರ್ಪಕ ಜೀವನಶೈಲಿಯಿಂದ ಆರೋಗ್ಯಕ್ಕೆ ಆಪತ್ತು- ಮಮತಾ ಗಟ್ಟಿ

 

error: Content is protected !!
Scroll to Top