(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 18. ಟಯರ್ ಸ್ಫೋಟಗೊಂಡ ಪರಿಣಾಮ ಸರಕಾರಿ ಬಸ್ಸೊಂದು ಪಲ್ಟಿಯಾಗಿ ಹೊಳೆಗೆ ಬಿದ್ದಿರುವ ಘಟನೆ ಸಂಪಾಜೆಯಲ್ಲಿ ನಡೆದಿದೆ.
ಧರ್ಮಸ್ಥಳದಿಂದ ಗುಂಡ್ಲುಪೇಟೆಗೆ ಸುಳ್ಯ ಮೂಲಕ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಸಂಪಾಜೆಯ ಗಡಿಕ್ಕಲು ಎಂಬಲ್ಲಿ ಟಯರ್ ಸ್ಫೋಟಗೊಂಡು ಅಪಘಾತಕ್ಕೀಡಾಗಿ ಹತ್ತಿರದ ಹೊಳೆಗೆ ಬಿದ್ದಿದ್ದು, ಪರಿಣಾಮ ಬಸ್ ನಲ್ಲಿದ್ದ 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.