(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 16. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚರ್ಚೆಗಳಿಂದ ಎಸ್ಕೆಎಸ್ಸೆಸ್ಸೆಫ್ ಕಾರ್ಯಕರ್ತರು ದೂರವಿರಿ. ಪರ ವಿರೋಧ ಚರ್ಚೆಗಳಿಂದ ಯಾವುದೇ ಲಾಭವಿಲ್ಲ ಅದು ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರಲಿದೆ. ಊರಿನ ಸಾರ್ವಜನಿಕ ವಲಯದಲ್ಲಿ ಸರ್ವ ಧರ್ಮದೊಂದಿಗೆ ಬೆರೆತು ಜೀವಿಸಿ ಎಂದು ಎಸ್ ಕೆ ಎಸ್ ಎಸ್ ಎಫ್ ಈಸ್ಟ್ ಜಿಲ್ಲಾ ಕೌನ್ಸಿಲರ್ ತಾಜುದ್ದೀನ್ ಟರ್ಲಿ ಕಾರ್ಯಕರ್ತರಿಗೆ ಕರೆ ನೀಡಿದರು.
ಎಸ್ಕೆಎಸ್ಸೆಸ್ಸೆಫ್ ಅಡ್ಕ ಇರುವಂಬಳ್ಳ ಝೈನೀಯ ಕ್ಯಾಂಪಸ್ ನಲ್ಲಿ ಆಯೋಜಿಸಿದ್ದ ಮನಸನ್ನದ್ಧತೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಚಟುವಟಿಕೆಗಳ ತುಣುಕುಗಳಲ್ಲಿ ಲೈಕ್ ಕಮೆಂಟ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಹೊರತು ಕಾನೂನು ಕ್ರಮ ಎದುರಿಸುವ ಸಾಧ್ಯತೆ ಇರುವುದರಿಂದ ನಾವು ದೂರವಿರಬೇಕೆಂದು ಅವರು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಶಾಖಾ ಅಧ್ಯಕ್ಷರಾದ ಸಿದ್ದೀಕ್ ಅಡ್ಕ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಝೈನಿಯಾ ಪ್ರಾಂಶುಪಾಲರಾದ ಅಬ್ದುಲ್ಲ ನಿಝಾಮಿ ನೆರವೇರಿಸಿದರು. ಹಿರಿಯ ಉಲಮಾ ನೇತಾರರಾದ ಜಿ ಎಸ್ ಮುಹಮ್ಮದ್ ಮದನಿ ಆತ್ಮ ಸಂಸ್ಕರಣೆ ವಿಷಯದಲ್ಲಿ ಅರಿವು ಮೂಡಿಸಿದರು. ವೇದಿಕೆಯಲ್ಲಿ ಸುಳ್ಯ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಕೋಶಾಧಿಕಾರಿ ಹಸೈನಾರ್ ಧರ್ಮತಣ್ಣಿ, ಇರುವಂಬಳ್ಳ ಜಮಾಅತ್ ಕಾರ್ಯದರ್ಶಿ ಮಹಮ್ಮದ್ ಕುಂಞಿ ತುಪ್ಪಕಲ್ಲು, ಅಲ್ ಅಮೀನ್ ಅಧ್ಯಕ್ಷರಾದ ಶಾಫಿ ಕೆ ಎಂ ಹಾಗೂ ಊರಿನ ಗಣ್ಯ ವ್ಯಕ್ತಿಗಳು, ಸಮಸ್ತ ಕಾರ್ಯಕರ್ತರು ಉಪಸ್ಥಿತರಿದ್ದರು. ಶಾಖಾ ಕಾರ್ಯದರ್ಶಿ ಸಿದ್ದೀಕ್ ಬೊವಿಕ್ಕಾನ ಸ್ವಾಗತಿಸಿ ವಂದಿಸಿದರು.