ಸುಬ್ರಹ್ಮಣ್ಯ: ಮಾ.17ರಿಂದ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ವಾರ್ಷಿಕ ನೇಮ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ. 16. ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ವಾರ್ಷಿಕ ನೇಮ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮಾ.17ರಿಂದ ಮಾ.20ರ ವರೆಗೆ ನಡೆಯಲಿದೆ.

ಮಾ.17ರಂದು ಬೆಳಗ್ಗೆ ಧ್ವಜಾರೋಹಣ (ಕೊಡಿ ಏರುವುದು) ನಡೆದು ಉಗ್ರಾಣ ಮುಹೂರ್ತ ನಡೆಯಲಿದೆ. ರಾತ್ರಿ ರಂಗಪೂಜೆ ನಡೆಯಲಿದೆ. ಮಾ.18ರಂದು ಸಂಜೆ ನೂಜಿಗುತ್ತು ಮನೆಯಿಂದ ದೈವಗಳ ಆಭರಣವನ್ನು ಮೆರವಣಿಗೆಯಲ್ಲಿ ದೈವಸ್ಥಾನಕ್ಕೆ ಸಂಪ್ರದಾಯದಂತೆ ತರುವುದು. ಬಳಿಕ ಸುಬ್ರಹ್ಮಣ್ಯ ಮಾಗಣೆ ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್ ಅವರಿಗೆ ಸ್ವಾಗತ ನಡೆಯಲಿದೆ. ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ ನಡೆದ ಬಳಿಕ ಹಲ್ಲತಾಯಿ ಮತ್ತು ಪಂಜುರ್ಲಿ ದೈವಗಳ ಭಂಡಾರ ತೆಗೆದು ನೇಮ. ಬಳಿಕ ನೂಜಿ ಬೆಡಿ ಪ್ರದರ್ಶನ ನಡೆಯಲಿದೆ.

Also Read  ಕಡಬ: ಉಪ ವಲಯ ಅರಣ್ಯಾಧಿಕಾರಿ ಸುಭಾಷ್ ಬಿ. ನಿಧನ

ಮಾ.19ರಂದು ಬೆಳಗ್ಗೆ ಗಂಟೆ 8.39ಕ್ಕೆ ಶ್ರೀ ಉಳ್ಳಾಲ್ತಿ ಅಮ್ಮನವರ ಭಂಡಾರ ತೆಗೆದು ನೇಮ. ಮದ್ಯಾಹ್ನ ಪ್ರಸಾದ ವಿತರಣೆ ನಡೆಯಲಿದೆ. ಅಪರಾಹ್ನ ಧ್ವಜಾವರೋಹಣ ನಡೆದು ಸಂಜೆ ಗುಳಿಗ ದೈವದ ಭಂಡಾರ ತೆಗೆದು ನೇಮ ನಡೆಯಲಿದೆ. ಮಾ.20ರಂದು ಬೆಳಗ್ಗೆ ಶ್ರೀ ಉಳ್ಳಾಲ್ತಿ ಅಮ್ಮನವರ ಹಾಗೂ ಪರಿವಾರ ದೈವಗಳ ಶುದ್ಧಿ ಕಲಶ ನಡೆದು ಮದ್ಯಾಹ್ನ ಮಹಾಪೂಜೆ ನಡೆಯಲಿದೆ. ರಾತ್ರಿ ನೂಜಿಗುತ್ತು ಅಂಕದಮಜಲು ಶಿರಾಡಿ ದೈವ ಮತ್ತು ಪರಿವಾರ ದೈವಗಳ ಭಂಡಾರ ತೆಗೆದು ನೇಮ ನಡೆಯಲಿದೆ.

error: Content is protected !!
Scroll to Top