ಕ್ಷುಲ್ಲಕ ವಿಚಾರಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಜೀವಬೆದರಿಕೆ ➤ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಮಾ. 16. ವ್ಯಕ್ತಿಯೋರ್ವರು ತೆಂಗಿನ ಮರದಿಂದ ಕಾಯಿಕಿತ್ತ ವಿಚಾರಕ್ಕೆ ಸಂಬಂಧಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ ಘಟನೆ ವಿಟ್ಲದಿಂದ ವರದಿಯಾಗಿದೆ.

ಈ ಕುರಿತು ಪುಣಚ ಗ್ರಾಮದ ಪಾವಲುಮೂಲೆ ನಿವಾಸಿ ಸುಂದರ ನಾಯ್ಕ್ ಪುತ್ರಿ ಮಮತಾ ಎಂಬವರು ಸ್ಥಳೀಯ ನಿವಾಸಿ ವಾಮನ ನಾಯ್ಕ್ ಎಂಬವರ ವಿರುದ್ದ ದೂರು ದಾಖಲಿಸಿದ್ದಾರೆ. ಮಾ. 14ರಂದು ನಾನು ಮನೆಯಲ್ಲಿದ್ದ ವೇಳೆ ವಾಮನ ನಾಯ್ಕ್ ರವರು ಬಂದು ನನ್ನ ತಂದೆ ತೆಂಗಿನ ಮರದಿಂದ ತೆಂಗಿನಕಾಯಿ ತೆಗೆಸಿದ ವಿಚಾರಕ್ಕೆ ಅವರಿಗೆ ಬೈಯಲಾರಂಬಿಸಿದರು. ಇದನ್ನು ಪ್ರಶ್ನಿಸಲು ತೆರಳಿದ ನನಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ತಡೆಯಲು ಬಂದ ನನ್ನ ತಂದೆ ಹಾಗೂ ತಾಯಿಗೆ ಹಲ್ಲೆ ನಡೆಸಿ ನಮಗೆ ಜೀವಬೆದರಿಕೆ ಒಡ್ಡಿದ್ದಾರೆ ಎಂದು ಮಮತಾರವರು ದೂರಿನಲ್ಲಿ ವಿವರಿಸಿದ್ದಾರೆ. ಈ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Also Read  ಇನ್ಮುಂದೆ ಹೊಸ್ಮಠ ನದಿಗೆ ತ್ಯಾಜ್ಯ ಎಸೆಯುವವರಿಗೆ ಕಾದಿದೆ ಕಂಟಕ ➤ ನದಿಯ ಇಕ್ಕೆಲಗಳಲ್ಲೂ ಸಿಸಿಟಿವಿ ಅಳವಡಿಕೆ ➤ ನದಿಯಲ್ಲಿ ವಾಹನ ತೊಳೆಯುವ, ಸ್ನಾನ ಮಾಡುವವರ ಮೇಲೂ ಕಾನೂನು ಕ್ರಮ

error: Content is protected !!
Scroll to Top