ಉಪ್ಪಿನಂಗಡಿ: ಕರ್ತವ್ಯ ನಿರತ ಸಂಚಾರ ಪೊಲೀಸ್ ಠಾಣಾ ಎಆರ್.ಎಸ್.ಐ ಗೆ ಸ್ಕೂಟರ್ ಢಿಕ್ಕಿ..!! ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 15. ಕರ್ತವ್ಯನಿರತ ಸಂಚಾರ ಪೊಲೀಸ್ ಠಾಣೆಯ ಎ ಆರ್ ಎಸ್ ಐ ಓರ್ವರಿಗೆ ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಪುತ್ತೂರು ಉಪ್ಪಿನಂಗಡಿ ರಸ್ತೆಯ ಸೇಡಿಯಾಪು ಎಂಬಲ್ಲಿ ಸಂಭವಿಸಿದೆ.


ಗಾಯಗೊಂಡವರನ್ನು ಎ ಆರ್ ಎಸ್ ಐ ಬಿ.ನಾರಾಯಣ ಗೌಡ ಹಾಗೂ ಸ್ಕೂಟರ್ ಸವಾರ ಬೆಳ್ಳಿಪ್ಪಾಡಿಯ ದೇವಿಪ್ರಸಾದ್ ಎಂದು ಗುರುತಿಸಲಾಗಿದೆ. ನಾರಾಯಣ ಗೌಡ ಅವರು ಸೇಡಿಯಾಪು ಎಂಬಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಪುತ್ತೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಸ್ಕೂಟರ್ ಢಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಈ ಕುರಿತು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಸುಬ್ರಹ್ಮಣ್ಯ: ಕುಕ್ಕೇ ಶ್ರೀ ದೇವಾಲಯಕ್ಕೆ ಭೇಟಿ ನೀಡಿದ ಕನ್ನಡ ಚಿತ್ರನಟಿ ಅಮೂಲ್ಯ

error: Content is protected !!
Scroll to Top