ಪತ್ನಿಯನ್ನು ಕೊಲೆಗೈದು ಹಂತಕರ ಪತ್ತೆ ಹಚ್ಚುವಂತೆ ನಾಟಕವಾಡಿದ್ದ ಪತಿರಾಯ ಅಂದರ್..!!

(ನ್ಯೂಸ್ ಕಡಬ) newskadaba.com ಕಲಬುರಗಿ, ಮಾ. 15. ಪತ್ನಿಯನ್ನೇ ಕೊಲೆಗೈದು ನಾಟಕವಾಡಿದ್ದ ಪತಿರಾಯನನ್ನು ಬಂಧಿಸಿದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ನಡೆದಿದೆ.


ಬಂಧಿತನನ್ನು ಬಸವರಾಜ್ ಕಟ್ಟಿಮನಿ (40) ಎಂದು ಗುರುತಿಸಲಾಗಿದೆ. ಮಾ. 03ರಂದು ಗ್ರಾಮದ ಹೊರವಲಯದ ಕೃಷಿ ಜಮೀನಿನಲ್ಲಿ ಶಾಮಲಾಬಾಯಿ ಎಂಬಾಕೆಯ ಕೊಲೆಯಾಗಿತ್ತು. ಬಂಧಿತ ಆರೋಪಿ ತನ್ನ ಪತ್ನಿಯ ತಲೆಯ ಮೇಲೆಯೇ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿದ್ದು, ಬಳಿಕ ಸತ್ಯ ಮುಚ್ಚಿಡಲು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಹೇಳಿ ಬಿಂಬಿಸಿದ್ದಲ್ಲದೇ, ತನಗೆ ನ್ಯಾಯಬೇಕು, ತನ್ನ ಪತ್ನಿ ಹಂತಕರನ್ನು ಪತ್ತೆ ಮಾಡಬೇಕು ಎಂದೂ ನಾಟಕವಾಡಿದ್ದ. ಈ ಬಗ್ಗೆ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಿದಾಗ ಸ್ವತಃ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ವಿಚಾರ ಬಯಲಾಗಿದೆ.

Also Read  ಬೆಂಗಳೂರು ಬಂದ್ ಹಿನ್ನೆಲೆ - ವಿಮಾನ ಪ್ರಯಾಣವನ್ನು‌ ರದ್ದುಗೊಳಿಸಿದ ಏರ್ ಲೈನ್ಸ್

error: Content is protected !!
Scroll to Top