ಒಂದೇ ವರ್ಷದಲ್ಲಿ ರಾಜ್ಯದ 1,397 ಶಾಲೆಗಳಿಗೆ ಬೀಗ ➤ ಕರಾವಳಿಯ 100 ಕ್ಕೂ ಅಧಿಕ ಶಾಲೆ ಬಂದ್..!!!

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 15. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ 1397 ಶಾಲೆಗಳನ್ನು ಶಾಶ್ವತವಾಗಿ ಮುಚ್ಚಲಾಗಿದೆ. ಸರಕಾರಿ ಶಾಲೆಗಳಲ್ಲಿ ಮಕ್ಕಳನ್ನು ಆಕರ್ಷಿಸಲು ಹಲವು ಪ್ರಯೋಗಗಳನ್ನು ಜಾರಿಗೆ ತರಲಾಗಿದೆ. ಕೊರೋನಾದ ಬಳಿಕ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯೂ ಹೆಚ್ಚಾಗಿದ್ದು, ಉಚಿತ ಸಮವಸ್ತ್ರ ಹಾಗೂ ಬಿಸಿಯೂಟದ ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೂ ಸಿದ್ದತೆ ನಡೆಯುತ್ತಿದೆ. ಆದರೂ 2021-22ನೇ ಸಾಲಿನಲ್ಲಿ 285 ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಎರಡು ಸರಕಾರಿ ಪ್ರೌಢಶಾಲೆಗಳಿಗೆ ಶಾಶ್ವತವಾಗಿ ಬೀಗ ಹಾಕಲಾಗಿದೆ. ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ನಿರ್ವಹಣೆ ಕೊರತೆ, ಮಕ್ಕಳ ದಾಖಲಾತಿ ಇಲ್ಲದೇ 721 ಪ್ರಾಥಮಿಕ ಶಾಲೆ, 245 ಪ್ರೌಢಶಾಲೆ, 101 ಅನುದಾನಿತ ಪ್ರಾಥಮಿಕ ಶಾಲೆ, 37 ಪ್ರೌಢಶಾಲೆ ಹಾಗೂ ಇತರ ಆರು ಶಾಲೆಗಳನ್ನು ಮುಚ್ಚಲಾಗಿದೆ.

Also Read  ಅಡಿಕೆ, ತೆಂಗು, ಕಾಳುಮೆಣಸು ಖರೀದಿ ಕೇಂದ್ರ 'ಹಿಂದುಸ್ಥಾನ್ ಸುಪಾರಿ ಟ್ರೇಡರ್ಸ್' ಕಡಬದಲ್ಲಿ ಶುಭಾರಂಭ ➤ ಕಡಬದ ಹಿಂದುಸ್ಥಾನ್ ರಬ್ಬರ್ ಟ್ರೇಡರ್ಸ್ ರವರ ಸಹಸಂಸ್ಥೆ

 

ಉಡುಪಿ ಜಿಲ್ಲೆಯಲ್ಲಿ 12ಸರಕಾರಿ, 19 ಅನುದಾನಿತ ಹಾಗೂ 48 ಅನುದಾನರಹಿತ ಶಾಲೆಗಳ ಸಹಿತ ಒಟ್ಟು 79 ಪ್ರಾಥಮಿಕ ಶಾಲೆ ಹಾಗೂ 1 ಅನುದಾನಿತ ಪ್ರೌಢಶಾಲೆಯನ್ನು ಮುಚ್ಚಲಾಗಿದೆ. ದ.ಕನ್ನಡ ಜಿಲ್ಲೆಯಲ್ಲಿ 2 ಸರಕಾರಿ, 5 ಅನುದಾನಿತ ಹಾಗೂ 4 ಖಾಸಗಿ ಶಾಲೆಗಳ ಸಹಿತ 11 ಪ್ರಾಥಮಿಕ ಶಾಲೆ, 2 ಅನುದಾನಿತ, 6 ಖಾಸಗಿ ಶಾಲೆ ಸಹಿತ ಎಂಟು ಪ್ರೌಢಶಾಲೆಗಳನ್ನು ಮುಚ್ಚಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಸರಕಾರಿ ಶಾಲೆಯನ್ನು ಸ್ಥಳೀಯ ಶಾಲೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಹಾಗೂ ನಿರ್ವಹಣೆ ಕೊರತರ, ಬೋಧಕ- ಬೊಧಕೇತರ ಸಿಬ್ಬಂದಿ ಕೊರತೆಯಿಂದಾಗಿ ವಿದ್ಯಾರ್ಥಿಗಳ ದಾಖಲಾತಿ ಕುಸಿದಿರುವುದರಿಂದ ಶಾಶ್ವತವಾಗಿ ಶಾಲೆಗಳನ್ನು ಮುಚ್ವುವಂತಾಗಿದೆ.

error: Content is protected !!
Scroll to Top