ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಸ್ಕೂಟರ್ ನಲ್ಲಿ ಬಂದು ಜೀವ ಬೆದರಿಕೆಯೊಡ್ಡಿ ಪರಾರಿ..!



(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 15. ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೋರ್ವರಿಗೆ ಸ್ಕೂಟರಿನಲ್ಲಿ ಬಂದ ಇಬ್ಬರು ಬೆದರಿಕೆಯೊಡ್ಡಿ ಪರಾರಿಯಾದ ಘಟನೆ ತಿಂಗಳಾಡಿಯಲ್ಲಿ ನಡೆದಿದೆ.








ಕೆದಂಬಾಡಿ ಗ್ರಾಮದ ಗುತ್ತುಮನೆ ನಿವಾಸಿ ನಿಶಾಂತ್ ಎಂಬವರು ಮಾ. 12ರಂದು ತಿಂಗಳಾಡಿ ಜಂಕ್ಷನ್ ನಲ್ಲಿ ನಿಂತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಅಬೂಬಕ್ಕರ್ ಹಾಗೂ ಖಾಸಿಂ ಎಂಬವರು ಅವಾಚ್ಯ ಶಬ್ದಗಳಿಂದ ಬೈದಿದ್ದು, ಅದೇ ಸಂದರ್ಭ ಸ್ಥಳದಲ್ಲಿದ್ದ ಸುದಿನ್, ದಿನೇಶ್, ಹರೀಶ್, ನಿಕ್ಷಿತ್, ನಿತೇಶ್ ಹಾಗೂ ಪ್ರತೀಕ್ ಎಂಬವರು ಗಮನಿಸಿ ವಿಚಾರಿಸಲೆಂದು ಬಂದಾಗ ದ್ವಿಚಕ್ರ ವಾಹನದಲ್ಲಿ ಬಂದ ಅಬೂಬಕ್ಕರ್ ಹಾಗೂ ಖಾಸಿಂ ಎಂಬವರು ಜೀವ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ ಎಂದು ನಿಶಾಂತ್ ಅವರು ‌ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






error: Content is protected !!
Scroll to Top