ನೆಲ್ಯಾಡಿ: ವಿಷಕಾರಿ ಹಾವು ಕಡಿದು ಮಹಿಳೆ ಮೃತ್ಯು..!!

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ. 13. ರಬ್ಬರ್ ಟ್ಯಾಪಿಂಗ್‌ಗೆ ಹೋಗಿದ್ದ ವೇಳೆ ವಿಷಕಾರಿ ಹಾವು ಕಡಿದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ನೆಲ್ಯಾಡಿಯ ಕೊಣಾಲು ಗ್ರಾಮದಲ್ಲಿ ನಡೆದಿದೆ.


ಮೃತ ಮಹಿಳೆಯನ್ನು ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಸದಸ್ಯೆ, ಕೊಣಾಲು ಗ್ರಾಮದ ಆರ್ಲ ನಿವಾಸಿ ರೋಸಮ್ಮ ಪಿ.ಡಿ ಯಾನೆ ವಲ್ಸಮ್ಮ(52) ಎಂದು ಗುರುತಿಸಲಾಗಿದೆ. ಇವರು ರಬ್ಬರ್ ತೋಟಕ್ಕೆ ಟ್ಯಾಪಿಂಗ್‌ಗೆಂದು ಹೋಗಿದ್ದ ವೇಳೆ ಇವರಿಗೆ ವಿಷಕಾರಿ ಹಾವೊಂದು ಕಡಿದಿದ್ದು, ಇದನ್ನರಿತ ರೋಸಮ್ಮರವರು ಅಲ್ಲಿಂದ ಪಕ್ಕದ ಮನೆಗೆ ಬಂದಿದ್ದು ಅಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ನೆಲ್ಯಾಡಿಯ ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದೆನ್ನಲಾಗಿದೆ.

Also Read  ಶಾಲಾ ಬಸ್ ಹರಿದು ಬಾಲಕನೋರ್ವ ಮೃತ್ಯು

error: Content is protected !!
Scroll to Top