ಮರ್ಹೂಂ ಆಸಿದ್ ಸ್ಮರಣಾರ್ಥ ಎಸ್ಡಿಪಿಐ ಪಾಂಡವರಕಲ್ಲು ವತಿಯಿಂದ ಬೃಹತ್ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಪಾಂಡವರಕಲ್ಲು, ಮಾ. 12. ಮರ್ಹೂಂ ಮಹಮ್ಮದ್ ಆಸಿದ್ ಸ್ಮರಣಾರ್ಥ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – ಪಾಂಡವರಕಲ್ಲು ವತಿಯಿಂದ ಕೆಎಮ್ ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಪಾಂಡವರಕಲ್ಲಿನ ಸೌಹಾರ್ದ ಸಭಾಭವನದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

 

ಇದರ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ಪಾಂಡವರಕಲ್ಲು ಅಧ್ಯಕ್ಷ ಸಾದಿಕ್ ಕೊಮಿನಡ್ಕ ವಹಿಸಿದ್ದರು. ಬಡಗಕಜೆಕಾರು ಗ್ರಾಮ ಪಂಚಾಯತ್ ಸದಸ್ಯ ಅಥಾವುಲ್ಲಾ ಕೆದಿಲೆ ಸ್ವಾಗತಿಸಿದರು. ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ಆಲ್ಫೋನ್ಸ್ ಫ್ರಾಂಕೋ ರಕ್ತದಾನದ ಮಹತ್ವವನ್ನು ವಿವರಿಸಿ ಪ್ರಭಾಷಣಗೈದರು. ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಕಾರ್ಯಕ್ರಮವನ್ನುದ್ದೇಶಿಸಿ ಹಿತಸಂದೇಶ ನೀಡಿದರು.

Also Read  ಉಡುಪಿಗೆ ತಟ್ಟದ ಸಾರಿಗೆ ನೌಕರರ ಬಿಸಿ ➤ ಎಂದಿನಂತೆ ಬಸ್ ಸಂಚಾರ

ಈ ಸಂದರ್ಭದಲ್ಲಿ ಬಡಗಕಜೆಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಸ್ಮಾ, ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿನ್ಸೆಂಟ್ ಸೇರಾ, ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ನಿಸಾರ್ ಕುದ್ರಡ್ಕ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಖಲಂದರ್ ಪರ್ತಿಪಾಡಿ, ಪಿ ಎಫ್ ಐ ಮಡಂತ್ಯಾರು ವಲಯಾಧ್ಯಕ್ಷ ಬಿ ಎಮ್ ರಝ್ಝಾಕ್, ಬದ್ರಿಯಾ ಜುಮ್ಮಾ ಮಸ್ಜಿದ್ ಪಾಂಡವರಕಲ್ಲು ಇದರ ಗೌರವಾಧ್ಯಕ್ಷ ಅಬೂಬಕರ್ ಕೆದಿಲೆ, ಬದ್ರಿಯಾ ಜುಮ್ಮಾ ಮಸ್ಜಿದ್ ಪಾಂಡವರಕಲ್ಲು ಇದರ ಪ್ರಧಾನ ಕಾರ್ಯದರ್ಶಿ ಕೆ ಪಿ ಉಮರ್ ಮುಸ್ಲಿಯಾರ್, ಊರಿನ ಹಿರಿಯರಾದ ಪುತ್ತುಮೋನು ಕುದುರು, ಬಡಗಕಜೆಕಾರು ಗ್ರಾಮ ಪಂಚಾಯತ್ ಸದಸ್ಯೆ ಶಮೀರಾ ಹನೀಫ್, ಎಸ್ ಡಿ ಪಿ ಐ ಕಾವಳಮೂಡೂರು – ಪಡೂರು ಗ್ರಾಮ ಸಮಿತಿ ಅಧ್ಯಕ್ಷ ಹೈದರ್ ಕಾವಳಕಟ್ಟೆ, ಪಿ ಎಫ್ ಐ ಪಾಂಡವರಕಲ್ಲು ಅಧ್ಯಕ್ಷ ನಾಸಿರ್ ನೀರಾರಿ, ಸಿ ಎಫ್ ಐ ಬೆಳ್ತಂಗಡಿ ಜಿಲ್ಲಾ ಕಾರ್ಯದರ್ಶಿ ಶಹೀರ್ ಪಾಂಡವರಕಲ್ಲು ಮತ್ತು ಹಿತೈಷಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಇಮ್ರಾನ್ ಪಾಂಡವರಕಲ್ಲು ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದಗೈದರು.

Also Read  ಸರ್ಕಾರಿ ವಕೀಲರುಗಳ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನ

error: Content is protected !!
Scroll to Top