ಕಡಬ ಪ.ಪಂಚಾಯತ್ ನಿಂದ ಪನ್ಯ ಅಂಗನವಾಡಿಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆ

(ನ್ಯೂಸ್ ಕಡಬ) newskadaba.com ಕಡಬ, ಮಾ. 11. ಕೋಡಿಂಬಾಳ ಗ್ರಾಮದ ಪನ್ಯ ಗುರಿಯಡ್ಕ ಅಂಗನವಾಡಿ ಕೇಂದ್ರದ ಬಹುಕಾಲದ ಕುಡಿಯುವ ನೀರಿನ ಸಮಸ್ಯೆಯನ್ನು ಕಡಬ ಪಟ್ಟಣ ಪಂಚಾಯತ್ ನೀಗಿಸಿದೆ. ಈ ಅಂಗನವಾಡಿ ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳ ಸಮಯದಿಂದಲೇ ಇದ್ದು, ಈ ಬಗ್ಗೆ ಯಾರಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇದೀಗ ಕಡಬ ಪ.ಪಂಚಾಯತ್ ಮುಖ್ಯಾಧಿಕಾರಿ ಫಕೀರ ಮೂಲ್ಯ ಅವರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ನೀರಿನ ಟ್ಯಾಂಕ್ ಹಾಗೂ ಪೈಪ್ ಲೈನ್ ಪಂಚಾಯತ್ ವತಿಯಿಂದ ಅಳವಡಿಸಿದ್ದಾರೆ.

Also Read  ವಿದ್ಯುತ್ ನಿಗಮದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ. ಸದಸ್ಯ ಆದಂ ಕುಂಡೋಳಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಜೈನಾಬಿ ಹಾಗೂ ಸಹಾಯಕಿ ಉಪಸ್ಥಿತರಿದ್ದರು.

 

error: Content is protected !!
Scroll to Top