(ನ್ಯೂಸ್ ಕಡಬ) newskadaba.com ಕಡಬ, ನ.08. ಕಪ್ಪು ಹಣದ ವಿರುದ್ಧದ ಪ್ರಧಾನಿ ಮೋದಿಯವರ ಹೋರಾಟಕ್ಕೆ ಯಶಸ್ಸು ಸಿಗಲಿ ಎಂದು ಕಡಬ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಬುಧವಾರ ಸಂಜೆ ಹರ್ಷಾಚರಣೆ ನಡೆಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಸತೀಶ್ ನಾಯ್ಕ್, ಸುಂದರ ಗೌಡ ಮಂಡೆಕರ, ಶಿವಪ್ರಸಾದ್ ರೈ ಮೈಲೇರಿ, ಆದಂ ಕುಂಡೋಳಿ, ಅಶೋಕ್ ಕುಮಾರ್, ಹರೀಶ್ ಉಂಡಿಲ, ಜಯರಾಂ ಆರ್ತಿಲ, ಮೋನಪ್ಪ ಗೌಡ ನಾಡೋಳಿ, ಫಯಾಝ್ ಕೆನರಾ, ಮೋಹನ ಕೊಯಿಲ ಮೊದಲಾದವರು ಹಾಜರಿದ್ದರು.