ಉಕ್ರೇನ್ ಸೇನೆಗೆ ಸೇರಿದ ತಮಿಳುನಾಡಿನ ಯುವಕ..!!

(ನ್ಯೂಸ್ ಕಡಬ) newskadaba.com. ಚೆನ್ನೈ, ಮಾ. 08.‌ರಷ್ಯಾದ ವಿರುದ್ದ ಹೋರಾಡಲು ತಮಿಳುನಾಡಿನ ಯುವಕ ಕೊಯಮತ್ತೂರು ಜಿಲ್ಲೆಯ ಸಾಯಿನಿಕೇಶ್ ರವಿಚಂದ್ರನ್ ಎಂಬಾತ ಉಕ್ರೇನ್ ನಲ್ಲಿ ಅರೆಸೈನಿಕ ಪಡೆಯನ್ನು ಸೇರಿರುವ ಕುರಿತು ವರದಿ ತಿಳಿಸಿದೆ.


ಈ ಕುರಿತು ವಿಚಾರಿಸಲು ಯುವಕನ ನಿವಾಸಕ್ಕೆ ಅಧಿಕಾರಿಗಳು ಭೇಟಿ ನೀಡಿದಾಗ ಭಾರತೀಯ ಸೇನೆಗೆ ಸೇರಲು ಸಾಯಿನಿಕೇಶ್ ರವಿಚಂದ್ರನ್ ಅರ್ಜಿ ಸಲ್ಲಿಸಿದ್ದರು, ಆದರೆ ತಿರಸ್ಕರಿಸಲಾಗಿತ್ತು ಎಂದು ಪೋಷಕರು ತಿಳಿಸಿದ್ದಾರೆ. 2018ರಲ್ಲಿ‌ ಸಾಯಿನಿಕೇಶ್ ಖಾರ್ಕಿವ್ ನ ನ್ಯಾಷನಲ್ ಏರೋಸ್ಪೇಸ್ ವಿವಿಯಲ್ಲಿ ಅಧ್ಯಯನ ಮಾಡಲು ಉಕ್ರೇನ್ ಗೆ ತೆರಳಿದ್ದು, ಜುಲೈ 2022ರ ಒಳಗೆ ಕೋರ್ಸ್ ಪೂರ್ಣಗೊಳಿಸಬೇಕಿತ್ತು. ಈ ನಡುವೆ ಉಕ್ರೇನ್ ನಲ್ಲಿ ಯುದ್ದ ಆರಂಭವಾಗಿ, ಸಾಯಿನಿಕೇಶ್ ಪೋಷಕರ ಸಂಪರ್ಕ ಕಳೆದುಕೊಂಡಿದ್ದ. ಈ ಕುರಿತು ಭಾರತೀಯ ರಾಯಭಾರಿ ಕಛೇರಿಗೆ ಮನವಿ ಮಾಡಿದ ಬಳಿಕ ಸಾಯಿನಿಕೇಶ್ ಸಂಪರ್ಕಕ್ಕೆ ಸಾಧ್ಯವಾಗಿದ್ದು, ಈ ವೇಳೆ ರಷ್ಯಾ ವಿರುದ್ದ ಹೋರಾಡಲು ಅರೆಸೈನಿಕ ಪಡೆಗೆ ಸೇರಿರುವುದಾಗಿ ತಿಳಿಸಿದ್ದಾನೆ.

Also Read  ಬ್ರೇಕಿಂಗ್ - ಮೇ 03 ರ ವರೆಗೆ ಲಾಕ್‌ಡೌನ್ ಮುಂದುವರಿಕೆ ➤ ಪ್ರಧಾನಿ ಮೋದಿ ಘೋಷಣೆ

error: Content is protected !!
Scroll to Top