ಬೆಂಕಿಗಾಹುತಿಯಾದ ಮನೆ..!! ➤ 8 ತಿಂಗಳ ಮಗು ಸಹಿತ ಐವರ ದುರ್ಮರಣ

(ನ್ಯೂಸ್ ಕಡಬ) newskadaba.com ಕೊಚ್ಚಿನ್, ಮಾ. 08. ಮನೆಗೆ ಬೆಂಕಿ ತಗುಲಿ ಎಂಟು ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ಐದು ಜನರು ಮೃತಪಟ್ಟ ದಾರುಣ ಘಟನೆ ಕೇರಳ ವರ್ಕಲಾದ ದಳವಪುರಂನಲ್ಲಿ ಮಂಗಳವಾರದಂದು ಬೆಳಗಿನ ಜಾವ ನಡೆದಿದೆ.


ಮೃತಪಟ್ಟವರನ್ನು ವರ್ಕಲಾದಲ್ಲಿ ಪ್ರತಾಪನ್ (62), ಶೆರ್ಲಿ (53), ಅಭಿರಾಮಿ (25), ಅವರ ಎಂಟು ತಿಂಗಳ ಮಗ ರಿಯಾನ್ ಮತ್ತು ಅಖಿಲ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಪ್ರತಾಪನ್ ಅವರ ಹಿರಿಯ ಮಗ ನಿಹುಲ್ ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಬೆಂಕಿ ಹೊತ್ತಿಕೊಂಡ ತಕ್ಷಣವೇ ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಐದು ಬೈಕ್ ಗಳು ಸುಟ್ಟುಹೋಗಿವೆ. ಘಟನೆಯ ಕಾರಣದ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also Read  ಭಾರತದ ಹಿರಿಯ ಕ್ರಿಕೆಟಿಗ ವಸಂತ್ ರಾಯ್ ಜಿ ನಿಧನ

error: Content is protected !!
Scroll to Top