ಉಳ್ಳಾಲ: ಮಗಳ ಬರ್ತ್ ಡೇ ಅದ್ದೂರಿಯಾಗಿ ಆಚರಿಸಲು ಕನಸು ಹೊತ್ತಿದ್ದ ತಂದೆ ನೇಣಿಗೆ ಶರಣು…!!

(ನ್ಯೂಸ್ ಕಡಬ) newskadaba.com ಉಳ್ಳಾಲ, ಮಾ. 08. ಮಗಳ ಐದನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ನಡೆಸಬೇಕೆಂಬ ಕನಸು ಹೊತ್ತಿದ್ದ ತಂದೆ ಹುಟ್ಟುಹಬ್ಬಕ್ಕೆ ವಾರವಿರುವಾಗಲೇ ಆತ್ಮಹತ್ಯೆಗೆ ಶರಣಾದ ಘಟನೆ ಉಳ್ಳಾಲದಲ್ಲಿ ನಡೆದಿದೆ.


ಆತ್ಮಹತ್ಯೆ ಮಾಡಿಕೊಂಡವರನ್ನು ಪ್ರವೀಣ್ ಪೂಜಾರಿ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಖಾಸಗಿ ಬಸ್ ಚೆಕ್ಕರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈತ, ಸೋಮವಾರದಂದು ಸಂಜೆ ಮನೆಗೆ ಬಂದು ಕೋಣೆಗೆ ತೆರಳಿದ್ದರು. ಇತ್ತ ಅವರ ತಾಯಿ ಮನೆಯ ಹೊರಗಡೆ ಬೀಡಿ ಕಟ್ಟುವ ಕೆಲಸದಲ್ಲಿ ತೊಡಗಿದ್ದು, ಸಂಜೆ 7:30ರ ಹೊತ್ತಿಗೆ ಪತ್ನಿ ಕೆಲಸದಿಂದ ಮರಳಿದಾಗ ಮನೆಯ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು. ಮುಂದಿನ ವಾರ ಮಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಹೇಳುತ್ತಿದ್ದ ತಂದೆ ದುರದೃಷ್ಟವಶಾತ್ ಅದಕ್ಕೂ ಮೊದಲೇ ಇಹಲೋಕ ತ್ಯಜಿಸಿದ್ದಾರೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಸುಳ್ಯ: ಕ್ಷುಲ್ಲಕ ವಿಚಾರಕ್ಕೆ ಕತ್ತಿಯಿಂದ ಕಡಿದು ಮೈದುನನ ಕೊಂದ ಅತ್ತಿಗೆ ➤ ತಾಯಿ - ಮಗನ ಬಂಧನ

error: Content is protected !!
Scroll to Top