ಮಹಿಳೆಯರ ವಿಡಿಯೋ ಹಾಗೂ ಫೋಟೋ ಚಿತ್ರೀಕರಣ ಮಾಡುತ್ತಿದ್ದ 60ರ ವೃದ್ದ ಅಂದರ್..!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 07. ನೆರೆಹೊರೆಯ ಮನೆಗಳಲ್ಲಿನ ಮಹಿಳೆಯರು ಹಾಗೂ ಯುವತಿಯರ ಫೋಟೋ ಹಾಗೂ ವಿಡಿಯೋಗಳನ್ನು ಅವರಿಗೆ ತಿಳಿಯದಂತೆಯೇ ಚಿತ್ರೀಕರಣ ಮಾಡುತ್ತಿದ್ದ ವೃದ್ದನನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.


ಬಂಧಿತ ಆರೋಪಿಯನ್ನು ಪೀಣ್ಯ ನಿವಾಸಿ ನಾರಾಯಣ ಗೌಡ ಎಂದು ಗುರುತಿಸಲಾಗಿದೆ. ಈತ ನೆರೆಹೊರೆಯ ಮಹಿಳೆಯರು ಹಾಗೂ ಯುವತಿಯರು ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ ಫೋಟೋ ಹಾಗೂ ವೀಡಿಯೋಗಳನ್ನು ಅವರಿಗೆ ತಿಳಿಯದಂತೆ ಚಿತ್ರೀಕರಿಸುತ್ತಿದ್ದ ಎನ್ನಲಾಗಿದೆ. ಇತೀಚೆಗೆ ಈತ ಇದೇ ರೀತಿ ಚಿತ್ರೀಕರಣದಲ್ಲಿ ತೊಡಗಿದ್ದ ವೇಳೆ ಪಕ್ಕದ ಮಹಿಳೆಯೋರ್ವರು ಇದನ್ನು ಗಮನಿಸಿದ್ದು, ಈ ಕುರಿತು ಪ್ರಶ್ನಿಸಿದಾಗ ವೃದ್ದ ಮೊಬೈಲ್ ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ಆತನ ಮೊಬೈಲ್ ಪರಿಶೀಲಿಸಿದಾಗ ಅಕ್ಕಪಕ್ಕದ ಮನೆಯ ಮಹಿಳೆಯರು ಹಾಗೂ ಯುವತಿಯರ ನೂರಕ್ಕೂ ಅಧಿಕ ಫೋಟೋ ಹಾಗೂ ವಿಡಿಯೋಗಳು ಪತ್ತೆಯಾಗಿದೆ. ಈ ಹಿನ್ನೆಲೆ ವೃದ್ದನ ವಿರುದ್ದ ನೀಡಿದ ದೂರಿನಂತೆ ಪೀಣ್ಯ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Also Read  ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ

error: Content is protected !!
Scroll to Top