ಬೆಳ್ಳಾರೆ: ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು…!

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 07. ಮರದ ಗೆಲ್ಲನ್ನು ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಮುಪ್ಪೇರ್ಯ ಗ್ರಾಮದ ಪಾಜಪಳ್ಳ ಎಂಬಲ್ಲಿ ನಡೆದಿದೆ.


ಮೃತ ವ್ಯಕ್ತಿಯನ್ನು ಮಾಧವ ಎಂದು ಗುರುತಿಸಲಾಗಿದೆ. ಇವರು ಪಾಜಪಳ್ಳ ರಾಜೇಂದ್ರಪ್ರಸಾದ್ ಎಂಬವರ ತೋಟದಲ್ಲಿ ಮರದ ಗೆಲ್ಲನ್ನು ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ವೈದ್ಯರ ಬೇಡಿಕೆಗಳ ಅಧ್ಯಯನಕ್ಕೆ ಕಾರ್ಯಪಡೆ ರಚನೆ - ಸಚಿವ ದಿನೇಶ್ ಗುಂಡುರಾವ್

error: Content is protected !!