ಮಲಗುವುದಾಗಿ ಹೇಳಿ ಕೋಣೆಗೆ ತೆರಳಿದ ಯುವಕ ನೇಣುಬಿಗಿದು ಆತ್ಮಹತ್ಯೆ..!!

(ನ್ಯೂಸ್ ಕಡಬ) newskadaba.com ಉಳ್ಳಾಲ, ಮಾ. 07. ಜಾತ್ರಾ ಮಹೋತ್ಸವಕ್ಕೆಂದು ದೊಡ್ಡಮ್ಮನ ಮನೆಗೆ ಬಂದಿದ್ದ ಯುವಕನೋರ್ವ ಮಲಗುವುದಾಗಿ ಕೋಣೆಗೆ ತೆರಳಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪ್ರಕಾಶ್ ನಗರ ಎಂಬಲ್ಲಿ ನಡೆದಿದೆ.


ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಪಡೀಲು ನಿವಾಸಿ ಸೌರವ್ ಎಂದು ಗುರುತಿಸಲಾಗಿದೆ. ಈತ ರವಿವಾರದಂದು ನಡೆದ ಪಿಲಾರು ಜಾತ್ರಾ ಮಹೋತ್ಸವಕ್ಕೆಂದು ಬಂದು ತನ್ನ ತಾಯಿಯ ಅಕ್ಕ ಪ್ರಕಾಶ್ ನಗರದ ಸುಜಾತ ಎಂಬವರ ಮನೆಗೆ ತೆರಳಿದ್ದು, ಮಧ್ಯಾಹ್ನ ಊಟದ ಬಳಿಕ ನಿದ್ದೆ ಬರುತ್ತದೆ ಎಂದು ಹೇಳಿ ಕೋಣೆಗೆ ತೆರಳಿದ್ದಾನೆ. ಸಂಜೆಯ ವೇಳೆ ತಾಯಿ ಮಗನನ್ನು ಎಬ್ಬಿಸಲು ಹೋದಾಗ ಸೌರವ್ ಫ್ಯಾನ್ ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ  ತಿಳಿದುಬರಬೇಕಿದೆ.

Also Read  ಮಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದಿದ್ದ ಇಂಜಿನಿಯರ್ ಗೆ 4 ವರ್ಷ ಜೈಲುಶಿಕ್ಷೆ

error: Content is protected !!
Scroll to Top