(ನ್ಯೂಸ್ ಕಡಬ) newskadaba.com ಬೈಂದೂರು, ಮಾ. 07. ಸ್ನೇಹಿತರ ಜೊತೆ ಸಮುದ್ರಕ್ಕೆ ತೆರಳಿದ ಯುವಕನೋರ್ವ ನೀರುಪಾಲಾದ ಘಟನೆ ತಾಲೂಕಿನ ಸೋಮೇಶ್ವರ ಎಂಬಲ್ಲಿ ನಡೆದಿದೆ.
ಮೃತ ಯುವಕನನ್ನು ಬೈಂದೂರು ಬಿಜು ಸಮೀಪದ ಬವಳಾಡಿ ನಿವಾಸಿ ಶಶಿಧರ್ ದೇವಾಡಿಗ ಎಂದು ಗುರುತಿಸಲಾಗಿದೆ. ಈತ ತನ್ನ ನಾಲ್ವರು ಸ್ನೇಹಿತರೊಂದಿಗೆ ಮೀನುಹಿಡಿಯಲು ತೆರಳಿದ್ದು, ಈ ಸಂದರ್ಭ ಅಲೆಗಳ ರಭಸಕ್ಕೆ ಸಿಲುಕಿ ನೀರುಪಾಲಾಗಿದ್ದಾನೆ. ತಕ್ಷಣವೇ ಮೀನುಗಾರರು ಹಾಗೂ ಸ್ನೇಹಿತರು ರಕ್ಷಣೆಗೆ ಮುಂದಾದರಾದರೂ ಶಶಿಧರ್ ಅವರನ್ನು ರಕ್ಷಣೆ ಸಾಧ್ಯವಾಗಿಲ್ಲ. ಮಗನನ್ನು ಕಳೆದುಕೊಂಡ ಮನೆಯವರ ಆಕ್ರಂದನ ಮುಗಿಲುಮುಟ್ಟಿದೆ.
Also Read ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಗುಚಿ ಇಬ್ಬರು ಕಣ್ಮರೆ ► ನಾಲ್ವರ ರಕ್ಷಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು