ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ..! ➤ ಫೋಕ್ಸೋ ಪ್ರಕರಣದಡಿ ಆರೋಪಿ ಅಂದರ್

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 07. ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕೆ ಸಂಬಂಧಿಸಿ ಆರೋಪಿಯನ್ನು ಪುತ್ತೂರು ಮಹಿಳಾ ಠಾಣಾ ಪೊಲೀಸರು ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ ಘಟನೆ ವರದಿಯಾಗಿದೆ.

ಬಂಧಿತನನ್ನು ಸುಳ್ಯ ಐವರ್ನಾಡು ನಿವಾಸಿ ರಕ್ಷಿತ್ ಎಂದು ಗುರುತಿಸಲಾಗಿದೆ. ಈತ ಪುತ್ತೂರಿನ ಕಾಲೇಜೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದು, ವಿಷಯ ಯುವತಿಯ ಮನೆಯವರಿಗೆ ತಿಳಿದು ಆತನಿಗೆ ಬುದ್ದಿವಾದ ಹೇಳಿದ್ದರು. ಅಲ್ಲದೇ ಬಾಲಕಿಯ ತಂದೆ ನೀಡಿದ ದೂರಿನಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಹಾಸ್ಟೆಲ್ ವಾರ್ಡನ್ ಗೆ ಬಾಲಕಿಯ ಅಣ್ಣನೆಂದು ಹೇಳಿ ಕರೆ ಮಾಡಿ ಆಕೆಗೆ ಫೋನ್ ಕೊಡುವಂತೆ ಹೇಳಿ ಮಾತನಾಡಿ ಹೊರಗಡೆ ಎಲ್ಲಾದರೂ ಭೇಟಿಯಾಗುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಯುವತಿ ವಿರೋಧಿಸಿದಾಗ ‘ಬರದೇ ಇದ್ದಲ್ಲಿ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿ, ಬೀರಮಲೆ ಗುಡ್ಡೆಗೆ ಬರುವುದಾಗಿ ಹೇಳಿ ಅಲ್ಲಿ ನಿನ್ನ ಲೈಂಗಿಕ ಕಿರುಕುಳ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾಳೆ. ಈ ಕುರಿತು ದೂರು ದಾಖಲಿಸಿದ ಮಹಿಳಾ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

Also Read  ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯಿಂದ ಭಾಷಣ

error: Content is protected !!
Scroll to Top