(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 07. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ, ಉಕ್ರೇನ್ ರಾಜಧಾನಿ ಕೈವ್‌ನಲ್ಲಿ ಗುಂಡೇಟು ತಗುಲಿ ಗಾಯಗೊಂಡಿದ್ದ ಭಾರತೀಯ ವಿದ್ಯಾರ್ಥಿ ಹರ್ಜೋತ್ ಸಿಂಗ್, ಸರ್ಕಾರದ ರಕ್ಷಣಾ ಕಾರ್ಯಾಚರಣೆ ಭಾಗವಾಗಿ ಇಂದು ಹಿಂತಿರುಗಲಿದ್ದಾರೆ. ಉಕ್ರೇನ್‌ನೊಂದಿಗೆ ಗಡಿಯನ್ನು ಹಂಚಿಕೊಳ್ಳುವ ದೇಶಗಳ ಪೈಕಿ ಒಂದಾದ ಪೋಲೆಂಡ್‌ನಿಂದ ಮರಳಿ ಕರೆತರಲಾಗುತ್ತಿರುವ 200 ಭಾರತೀಯರಲ್ಲಿ ಇವರು ಕೂಡಾ ಒಬ್ಬರಾಗಿದ್ದಾರೆ.
ಪೋಲೆಂಡ್‌ನಲ್ಲಿ ತೆರವು ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುತ್ತಿರುವ ಕೇಂದ್ರ ಸಚಿವ ವಿಕೆ ಸಿಂಗ್, “ಹರ್ಜೋತ್ ಸಿಂಗ್ ಕೈವ್ ಯುದ್ಧದ ಸಂದರ್ಭದಲ್ಲಿ ಗುಂಡು ಹಾರಿಸಲ್ಪಟ್ಟ ಭಾರತೀಯ. ಅವನ ಪಾಸ್‌ಪೋರ್ಟ್ ಸಹ ಗೊಂದಲದಲ್ಲಿ ಕಳೆದುಹೋಗಿದೆ. ಹರ್ಜೋತ್ ನಾಳೆ ನಮ್ಮೊಂದಿಗೆ ಭಾರತವನ್ನು ತಲುಪುತ್ತಿದ್ದಾರೆ ಎಂದು ತಿಳಿಸಲು ಸಂತೋಷವಾಗಿದೆ. ಮನೆ ಆಹಾರ ಮತ್ತು ಆರೈಕೆಯೊಂದಿಗೆ ಶೀಘ್ರವಾಗಿ ಚೇತರಿಸಿಕೊಳ್ಳಬಹುದೆಂದು ಭಾವಿಸುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.